ಕುಂಬಳೆ: ಕುಂಬಳೆ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನಾಯ್ಕಾಪು ನಿವಾಸಿ ಕೆ. ಅಕ್ಷಿತ್ ಬಂಧಿತ. ಈತನ ವಶದಲ್ಲಿದ್ದ 5.4ಲೀ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಮಡಿದ್ದಾರೆ. ಕುಂಬಳೆ ಪೇಟೆಯ ಹೋಟೆಲೊಂದರ ಮುಂಭಾಗದಿಂದ ಮದ್ಯ ಹೊಂದಿದ್ದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.
ಕರ್ನಾಟಕದಿಂದ ಮದ್ಯ ಸಾಗಿಸಿ ತಂದು ಕುಂಬಳೆ ಪರಿಸರದಲ್ಲಿ ಮಾರಾಟ ಮಾಡುವುದು ಈತನ ದಂಧೆಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

