HEALTH TIPS

ಡಲ್ಲಾಸ್‌ನಲ್ಲಿ ಅಲ್ಲ, ಪಾಕ್‌ನಲ್ಲಿ ಇದ್ದಂತೆ ಭಾಸ: ಅಮೆರಿಕದ ಸಂಸದ

ನ್ಯೂಯಾರ್ಕ್‌: 'ಅಮೆರಿಕದ ಟೆಕ್ಸಾಸ್‌ ರಾಜ್ಯದ ಕೆಲ ಪ್ರದೇಶಗಳು ಇಸ್ಲಾಮೀಕರಣಕ್ಕೆ ಒಳಗಾಗುತ್ತಿದ್ದು, ಅಲ್ಲಿಯ ಸ್ಥಳೀಯ ಮಾಲ್‌ಗಳಿಗೆ ಭೇಟಿ ನೀಡಿದರೆ ಡಲ್ಲಾಸ್‌ನಲ್ಲಿ ಅಲ್ಲ, ಪಾಕಿಸ್ತಾನದಲ್ಲಿ ಇದ್ದಂತೆ ಭಾಸವಾಗುತ್ತದೆ' ಎಂದು ಅಮೆರಿಕದ ಕಾಂಗ್ರೆಸ್‌ (ಸಂಸತ್‌) ಸದಸ್ಯ ಬ್ರಾಂಡನ್‌ ಗಿಲ್‌ ಕಳವಳ ವ್ಯಕ್ತಪಡಿಸಿದ್ದಾರೆ.

'ಡಲ್ಲಾಸ್‌ ಪ್ರದೇಶದಲ್ಲಿನ ಇಸ್ಲಾಮೀಕರಣದ ಬಗ್ಗೆ ಚಿಂತಿತರಾಗಿರುವ ಮತದಾರರು ಈ ಬಗ್ಗೆ ನನ್ನ ಬಳಿ ಆಗಾಗ ಹೇಳುತ್ತಿರುತ್ತಾರೆ' ಎಂದು ರಿಪಬ್ಲಿಕನ್‌ ಪಕ್ಷದ ಸದಸ್ಯರಾಗಿರುವ ಗಿಲ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ಇಲ್ಲಿನ ಮತದಾರರು ತಾವು ತಲೆಮಾರುಗಳಿಂದ ಹೊಂದಿದ್ದ ಭೂಮಿಯ ಬಳಿ ತಲೆ ಎತ್ತುತ್ತಿರುವ ಮಸೀದಿಗಳ ಬಗ್ಗೆ ಕಳವಳಗೊಂಡು ಪ್ರಶ್ನಿಸುತ್ತಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

'ನಮ್ಮಲ್ಲಿನ ಕೆಲ ಸಮುದಾಯಗಳು ಪೂರ್ಣವಾಗಿ ರೂಪಾಂತರಗೊಳ್ಳುತ್ತಿವೆ. ಸ್ಥಳೀಯ ಮಾಲ್‌ಗಳನ್ನು ಗಮನಿಸಿದರೆ, ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಅಲ್ಲ, ಪಾಕಿಸ್ತಾನದಲ್ಲಿ ಇದ್ದಂತೆ ಭಾಸವಾಗುತ್ತಿದೆ ಎಂಬುದು ಇಲ್ಲಿನ ಮತದಾರ ಗಂಭೀರ ಪ್ರಶ್ನೆಯಾಗಿದೆ' ಎಂದು ಅವರು ವಿವರಿಸಿದ್ದಾರೆ.

'ನಾವು ಪ್ರೀತಿಸುವ ಅಮೆರಿಕವನ್ನು ಸಾಮೂಹಿಕ ಇಸ್ಲಾಮಿಕ್‌ ವಲಸೆ ನಾಶ ಮಾಡುತ್ತಿದೆ' ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ವೊಂದರಲ್ಲಿ ಹೇಳಿದ್ದಾರೆ.

ಅಮೆರಿಕದ ಸಂಸತ್ತಿನಲ್ಲಿ ಟೆಕ್ಸಾಸ್‌ ಅನ್ನು ಪ್ರತಿನಿಧಿಸುವ ಸಂಸದರ ಪೈಕಿ ಒಬ್ಬರಾದ ಗಿಲ್‌, 2024ರಲ್ಲಿ ನ್ಯಾಯಾಂಗ, ಬಜೆಟ್‌ ಮತ್ತು ಮೇಲ್ವಿಚಾರಣಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries