ಕಾಸರಗೋಡು: ಕಾಸರಗೋಡಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ 90ನೇ ತ್ರಿಮೂರ್ತಿ ಶಿವ ಜಯಂತಿ ಕಾರ್ಯಕ್ರಮ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಕಾಸರಗೋಡು ಕೇಂದ್ರದಲ್ಲಿ ನಡೆಯಿತು.ಶಿವ ಧ್ವಜಾರೋಹಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಿವೃತ್ತ ಎಎಸ್.ಐ.ಸಿ.ಎಚ್.ಬಾಬು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅನಂತರಾಮ ಪಿ.ಕಾಸರಗೋಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ವಿಶ್ವವಿದ್ಯಾಲಯದ ಕಾಸರಗೋಡು ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ವಿಜಯಲಕ್ಷ್ಮೀ ಮಹಾ ಶಿವರಾತ್ರಿಯ ಸಂದೇಶ ನೀಡಿದರು.ಸಹಾಯಕ ಪ್ರಾಧ್ಯಾಪಕಿ ರೋಹಿಣಿ, ಸತೀಶ್ ಡಿ.ಕರಿವೇಲಿ, ರವಿಶಂಕರ ನಾಯರ್ ಶುಭಹಾರೈಸಿದರು. ಗುಣಪಾಲ, ವರಪ್ರಸಾದ್ ಕೋಟೆಕಣಿ, ರವೀಂದ್ರ ಪೂಜಾರಿ ಅವರನ್ನು ರಾಜಯೋಗಿನಿ ಬಿ.ಕೆ.ಮಂಗಳ, ಬಿ.ಕೆ.ಪ್ರೇಮ ಈ ಸಂದರ್ಭ ಗೌರವಿಸಿದರು. ಮಿನ್ಹಾ ಎಂ, ಸುಷ್ಮಾ ಮಲ್ಯ ಅವರನ್ನೂ ಗೌರವಿಸಲಾಯಿತು. ಆಶಿಕಾ, ಕೃಪಾ, ಕೀರ್ತಿ, ತುಷಾರ್,ಅಕ್ಷಿತ್ ಅವರಿಂದ ನೃತ್ಯ ಪ್ರದರ್ಶನ ನಡೆಯಿತು. ವಿಮಲ ಸ್ವಾಗತಿಸಿ, ಬಿ.ಕೆ.ಕವಿತ ವಂದಿಸಿದರು. ಬಿ.ಕೆ.ಸುಬ್ರಹ್ಮಣ್ಯ ಪರಿಚಯ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.


