HEALTH TIPS

ರಶ್ಯದಿಂದ ತೈಲ ಖರೀದಿಗೆ ಭಾರತಕ್ಕೆ ನಿರ್ಬಂಧ| ಅಮೆರಿಕದ ವಿರುದ್ಧ ರಶ್ಯ ವಾಗ್ದಾಳಿ

ಮಾಸ್ಕೋ: ರಶ್ಯದಿಂದ ತೈಲವನ್ನು ಖರೀದಿಸದಂತೆ ಭಾರತ ಮತ್ತಿತರ ದೇಶಗಳಿಗೆ ನಿರ್ಬಂಧ ವಿಧಿಸುತ್ತಿರುವುದಕ್ಕಾಗಿ ರಶ್ಯವು ಅಮೆರಿಕದ ಟ್ರಂಪ್ ಆಡಳಿತದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ. ಟ್ರಂಪ್ ಬಳಗವು ಸುಂಕ ಹೇರಿಕೆ, ನಿರ್ಬಂದಗಳು ಹಾಗೂ ಆರ್ಥಿಕ ಪ್ರಾಬಲ್ಯವನ್ನು ಸಾಧಿಸಲು ನೇರವಾಗಿ ನಿಷೇಧ ಹೇರಿಕೆಯಂತಹ ಬೆದರಿಕೆಯ ಕ್ರಮಗಳನ್ನು ಈ ದೇಶಗಳ ವಿರುದ್ಧ ಅನುಸರಿಸುತ್ತಿದೆಯೆಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯಿ ಲ್ಯಾವ್ರೋವ್ ತಿಳಿಸಿದ್ದಾರೆ.

''ಟ್ರಂಪ್ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಕಳೆದ ವರ್ಷ ಆಲಾಸ್ಕದಲ್ಲಿ ನಡೆದ ಶೃಂಗಸಭೆಯಲ್ಲಿ, ಉಕ್ರೇನ್ ಸಂಘರ್ಷ ಕೊನೆಗೊಳಿಸುವ ಕುರಿತಾಗಿ ಅಮೆರಿಕ ಮಾಡಿದ್ದ ಪ್ರಸ್ತಾವನೆಯನ್ನು ಮಾಸ್ಕೋ ಸ್ವೀಕರಿಸಿತ್ತು. ಅಮೆರಿಕದ ನಿಬಂಧನೆಗಳನ್ನು ಒಪ್ಪಿಕೊಂಡ ಹೊರತಾಗಿಯೂ ವಾಶಿಂಗ್ಟನ್ ರಶ್ಯದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದೆ ಹಾಗೂ ರಶ್ಯದಿಂದ ಇಂಧನ ಖರೀದಿಸದಂತೆ ಇತರ ದೇಶಗಳ ಮೇಲೆ ನಿರ್ಬಂಧ ಹೇರಿದೆ ಎಂದರು.

ಸಾಗರ ಕಾನೂನಿನ ಕುರಿತಾದ ವಿಶ್ವಸಂಸ್ತೆಯ ಒಡಂಬಡಿಕೆಯನ್ನು ಉಲ್ಲೇಘಿಸಿ ಅಮೆರಿಕವು ಸಮುದ್ರದಲ್ಲಿ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಭಾರತ ಹಾಗೂ ನಮ್ಮ ಇತರ ಪಾಲುದಾರರು ಕಡಿಮೆದರದ ಹಾಗೂ ಯೋಗ್ಯಬೆಲೆಯ ರಶ್ಯನ್ ಇಂಧನ ಸಂಪನ್ಮೂಲಗಳು ಖರೀದಿಸುವುದನ್ನು ನಿಷೇಧಿಸಲು ಅಮೆರಿಕವು ಯತ್ನಿಸುತ್ತಿದೆ ಮತ್ತು ಅಮೆರಿಕದ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ)ವನ್ನು ದುಬಾರಿ ಬೆಲೆಗೆ ಖರೀದಿಸುವಂತೆ ಆ ದೇಶಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಲ್ಯಾವ್ರೋವ್ ತಿಳಿಸಿದ್ದಾರೆ.

ಇಂಧನ ಮಾರ್ಗಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಪ್ರಾಬಲ್ಯವನ್ನು ಸ್ಥಾಪಿಸುವುದು ವಾಶಿಂಗ್ಟನ್‌ನ ಉದ್ದೇಶವಾಗಿದೆ. ಇದಕ್ಕಾಗಿ ಅದು ಸುಂಕಗಳು, ನಿರ್ಬಂಧಗಳು, ಪ್ರತ್ಯಕ್ಷ ನಿಷೇಧಗಳು ಹೇರುತ್ತಿದೆ ಮತ್ತು ಇತರ ದೇಶಗಳ ಜೊತೆ ವ್ಯವಹಾರಗಳನ್ನು ನಡೆಸುವುದನ್ನು ತಡೆಗಟ್ಟುತ್ತಿದೆ ಎಂದರು.

ನೂತನ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿ, ಹೊಸದಿಲ್ಲಿಯು ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿದೆಯೆಂದು ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬಳಿಕ ರಶ್ಯದಿಂದ ಈ ಮಹತ್ವದ ಪ್ರತಿಕ್ರಿಯೆ ಹೊರಬಿದ್ದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries