HEALTH TIPS

ಮುಸ್ಲಿಂ ಯುವಕನ ಜೊತೆ ಕಾಸರಗೋಡಿನ ಹಿಂದೂ ಯುವತಿ ರಿಜಿಸ್ಟರ್ಡ್‌ ವಿವಾಹ, ಲವ್‌ ಜಿಹಾದ್‌ ಆರೋಪ, ಹೆತ್ತವರ ದೂರು

ಮಂಗಳೂರು: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ರಿಜಿಸ್ಟರ್ ಮ್ಯಾರೇಜ್  ಆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಯುವತಿ ಕಾಸರಗೋಡಿನ  ಮೀಪುಗುರಿ ಪ್ರದೇಶದ ನಿವಾಸಿಯಾಗಿದ್ದು, ವಯನಾಡು ಮೂಲದ ಮಹಮ್ಮದ್ ಮಿಲ್ದಾಜ್ ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದು, ರಿಜಿಸ್ಟರ್ ಮ್ಯಾರೇಜ್ ಆಗಿದ್ದಾಳೆ.

ಇದೀಗ ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದ್ (love jihad) ಅಂತ ಆರೋಪಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ‌ ವಯನಾಡು ಮೂಲದ ಮಹಮ್ಮದ್ ಮಿಲ್ದಾಜ್ ಎಂಬ ಯುವಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಇರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ. ಅತ್ತ ಮೀಪುಗುರಿ ಮೂಲದ 23 ವರ್ಷದ ಯುವತಿ ಮಂಗಳೂರು ಸುರತ್ಕಲ್‌ನಲ್ಲಿರುವ ಕಾಲೇಜ್ ಒಂದರಲ್ಲಿ ಓದುತ್ತಾ ಇದ್ದಳು. ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.

ಇಬ್ಬರೂ ಕೇರಳದ ವಯನಾಡಿನಲ್ಲಿರುವ ರಿಜಿಸ್ಟರ್ ಆಫೀಸ್‌ನಲ್ಲಿ ಕಳೆದ ಜನವರಿ 31ರಂದು ರಿಜಿಸ್ಟರ್ ಮದುವೆಯಾಗಿದ್ದಾರೆ. ಅತ್ತ ಮಗಳು ರಿಜಿಸ್ಟರ್ ಮದುವೆಯಾಗುತ್ತಿದ್ದಂತೆ, ಇತ್ತ ಅದರ ಬಗ್ಗೆ ಬಗ್ಗೆ ಗೊತ್ತಾಗಿ ಆಕೆ ವಾಸ್ತವ್ಯವಿದ್ದ ಪಿಜಿಗೆ ಬಂದು ಆಕೆಯ ಪೋಷಕರು ವಿಚಾರಿಸಿದ್ದಾರೆ. ಪಿಜಿ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕೆಲವು ವಿಚಾರ ಬೆಳಕಿಗೆ ಬಂದಿದೆ. ಆಕೆ ಫೆಬ್ರವರಿ 9ರಂದು ಪಿಜಿಯಿಂದ ತೆರಳಿದ ವಿಡಿಯೋ ಸೆರೆಯಾಗಿದೆ. ಅದಾದ ಮೇಲೆ ಮಗಳು ಸಂಪರ್ಕಕ್ಕೆ ಸಿಗದೇ ಪೋಷಕರು ಕಂಗಾಲಾಗಿದ್ದಾರೆ. ಮಗಳು ಸಂಪರ್ಕಕ್ಕೆ ಸಿಗದೇ ಇರುದ್ದರಿಂದ ಸುರತ್ಕಲ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ನೀಡಿದ್ದಾರೆ. ಇದೊಂದು ಲವ್ ಜಿಹಾದ್ ಪ್ರಕರಣ ಅಂತ ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries