ಕೀವ್: ಉಕ್ರೇನ್‌ನ ಕೀವ್ ಮೇಲೆ ರಷ್ಯಾವು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆ ಭಾನುವಾರ ತಿಳಿಸಿದೆ.
ರಷ್ಯಾದ ದಾಳಿಯು ಕೀವ್ ನಗರದ ಅಂಚಿನಲ್ಲಿರುವ ಐದು ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ.
ನಾಶವಾದ ಕಟ್ಟಡಗಳ ಅವಶೇಷದಡಿ ಸಿಲುಕಿದ್ದ ಒಂದು ಮಗು ಸೇರಿದಂತೆ ಎಂಟು ಜನರನ್ನು ರಕ್ಷಿಸಲಾಗಿದೆ ಎಂದು ಅದು ತಿಳಿಸಿದೆ.
ಅಲ್ಲದೇ, ಉಕ್ರೇನ್‌ನ ಇಂಧನ ಮೂಲಸೌಕಾರ್ಯದ ಮೇಲೆ ದಾಳಿ ನಡೆಸಿದ್ದು, ಪರಿಣಾಮ ವ್ಯಾಪಕ ಬೆಂಕಿ ಆವರಿಸಿತು. ಬಳಿಕ ಅದನ್ನು ನಂದಿಸಲಾಯಿತು ಎಂದು ತುರ್ತು ಸೇವೆ ತಿಳಿಸಿದೆ.

