HEALTH TIPS

ರೂಬಲ್‌ ಅವರಿಗೆ 'ಗ್ಲೋಬಲ್‌ ಟೀಚರ್‌' ಪ್ರಶಸ್ತಿ ಪ್ರದಾನ

ದುಬೈ: ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರಿಗೆ ನೀಡುವ 'ಗ್ಲೋಬಲ್‌ ಟೀಚರ್‌' ಪ್ರಶಸ್ತಿಯನ್ನು ಭಾರತದ ಶಿಕ್ಷಕಿ ರೂಬಲ್‌ ನಾಗಿ ಅವರಿಗೆ ಗುರುವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ಒಂದು ಮಿಲಿಯನ್ ಡಾಲರ್ (ಅಂದಾಜು ₹9 ಕೋಟಿ) ನಗದು ಒಳಗೊಂಡಿದೆ. ರೂಬಲ್‌ ನಾಗಿ ಪ್ರತಿಷ್ಠಾನದಡಿ ಅವರು ಭಾರತದಾದ್ಯಂತ 800 ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

ಕೊಳೆಗೇರಿಗಳ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ, ಅವುಗಳ ಮೂಲಕ ಸಾಹಿತ್ಯ, ವಿಜ್ಞಾನ, ಗಣಿತ ಹಾಗೂ ಇತಿಹಾಸದ ಪಾಠಗಳನ್ನು ಬೋಧಿಸುತ್ತಿದ್ದಾರೆ.

'ಶಾಲೆಗೆ ಹೋಗದ ಮಕ್ಕಳಿಗೆ ರಚನಾತ್ಮಕ ಕಲಿಕೆ ಪ್ರಾರಂಭಿಸುವುದು ನನ್ನ ಗುರಿಯಾಗಿದೆ. ಉಚಿತ ವೃತ್ತಿ ತರಬೇತಿ ಕೇಂದ್ರ ಸ್ಥಾಪಿಸಲು ಈ ಪ್ರಶಸ್ತಿ ಮೊತ್ತವನ್ನು ಬಳಸುವ ಯೋಜನೆ ಇದೆ' ಎಂದು ಅವರು ಹೇಳಿದ್ದಾರೆ.

ನಾಗಿ ಅವರು 'ಗ್ಲೋಬಲ್‌ ಟೀಚರ್‌' ಪ್ರಶಸ್ತಿ ಪಡೆಯುತ್ತಿರುವ 10ನೇ ವ್ಯಕ್ತಿಯಾಗಿದ್ದಾರೆ. 2015ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries