HEALTH TIPS

300 ಪತ್ರಕರ್ತರನ್ನು ವಜಾಗೊಳಿಸಿದ ವಾಷಿಂಗ್ಟನ್‌ ಫೋಸ್ಟ್‌

ವಾಷಿಂಗ್ಟನ್‌: ಅಮೆರಿಕದ ಪ್ರಮುಖ ದೈನಿಕ ಬುಧವಾರ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 300ಕ್ಕೂ ಅಧಿಕ ಪತ್ರಕರ್ತರನ್ನು ವಜಾಗೊಳಿಸಿದೆ.

ತಿರುವನಂತಪುರ ಸಂಸದ ಶಶಿ ತರೂರ್‌ ಅವರ ಮಗ, ಪತ್ರಕರ್ತ ಇಶಾನ್‌ ತರೂರ್‌ ಸೇರಿದಂತೆ ಕ್ರೀಡೆ, ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವರದಿ ಮಾಡುತ್ತಿದ್ದ ಪತ್ರಕರ್ತರು ಕೂಡ ಇದರಲ್ಲಿದ್ದಾರೆ.

ಕಂಪನಿಯ ನಿರ್ಧಾರದ ಕುರಿತು ತಿಳಿದಿರುವ ಇಬ್ಬರ ಪ್ರಕಾರ, ಒಟ್ಟು ಸಿಬ್ಬಂದಿಯ ಪೈಕಿ ಶೇಕಡ 30ರಷ್ಟು ಮಂದಿಯನ್ನು ವಜಾಗೊಳಿಸಲಾಗಿದೆ. ಸುದ್ದಿಸಂಸ್ಥೆಯಲ್ಲಿ ಒಟ್ಟು 800 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿಬ್ಬಂದಿ ಕಡಿತಕ್ಕೆ ಪತ್ರಿಕೆಯ ಮಾಲೀಕತ್ವ ಹೊಂದಿರುವ ನ್ಯಾಸ್‌ ಹೋಲ್ಡಿಂಗ್‌ನ ಮುಖ್ಯಸ್ಥ ಜೆಫ್‌ ಬೆಜೊಸ್‌ ಸಹಿ ಹಾಕಿದ್ದಾರೆ.

'ಸಂಸ್ಥೆಯು ದೀರ್ಘಕಾಲದಿಂದ ತೀವ್ರ ನಷ್ಟ ಅನುಭವಿಸುತ್ತಿದ್ದು, ಓದುಗರ ಅಗತ್ಯವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಸಿಬ್ಬಂದಿ ಕಡಿತ ಮಾಡಲಾಗುತ್ತಿದೆ' ಎಂದು ಪತ್ರಿಕೆಯ ಕಾರ್ಯಕಾರಿ ಸಂಪಾದಕ ಮ್ಯಾಟ್‌ ಮುರ್ರೆ ಸಿಬ್ಬಂದಿಯ ಮುಂದೆ ತಮ್ಮ ಸಂಕಷ್ಟ ತೋಡಿಕೊಂಡರು.

'ಎಲ್ಲ ವಿಭಾಗಗಳಲ್ಲಿ ಇದರಿಂದ ಪರಿಣಾಮ ಉಂಟಾಗಲಿದ್ದು, ಸಂಸ್ಥೆಯು ಮುಂದಿನ ದಿನಗಳಲ್ಲಿ ರಾಷ್ಟ್ರೀಯ, ರಾಜಕೀಯ, ಉದ್ಯಮ, ಆರೋಗ್ಯ ಹಾಗೂ ಇತರೆ ವಿಭಾಗಗಳ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲಿದೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries