HEALTH TIPS

ಎಪ್ಸ್ಟೀನ್ ಕಡತಗಳಲ್ಲಿ ಉಲ್ಲೇಖಿಸಿರುವ ಅಂಶ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಕಾರಣವಾಗಬಹುದು: ವಿಶ್ವಸಂಸ್ಥೆ ಸಮಿತಿ ವರದಿ

ವಿಶ್ವಸಂಸ್ಥೆ: ಲೈಂಗಿಕ ಅಪರಾಧಿ ಜೆಫ್ರೀ ಎಪ್ಸ್ಟೀನ್‍ಗೆ ಸಂಬಂಧಿಸಿದ ಹೊಸದಾಗಿ ಬಿಡುಗಡೆಯಾದ ಫೈಲ್‍ಗಳಲ್ಲಿ ಉಲ್ಲೇಖಿಸಿರುವ ಅಂಶಗಳು ಮಾನವೀಯತೆಯ ವಿರುದ್ದದ ಅಪರಾಧಗಳಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ನೇಮಿಸಿರುವ ಸ್ವತಂತ್ರ ತಜ್ಞರ ಸಮಿತಿ ಹೇಳಿದೆ.

ಅಮೆರಿಕದ ನ್ಯಾಯಾಂಗ ಇಲಾಖೆ ಸಾರ್ವಜನಿಕಗೊಳಿಸಿರುವ ವಿಷಯಗಳು ಆಪಾದಿತ ಅಪರಾಧಗಳು ಸರ್ವಾಧಿಕಾರದ ಸಿದ್ದಾಂತಗಳು, ವರ್ಣಭೇದ ನೀತಿ, ಬೇರೂರಿರುವ ಭ್ರಷ್ಟಾಚಾರ ಮತ್ತು ತೀವ್ರ ಸ್ತ್ರೀದ್ವೇಷದಿಂದ ರೂಪುಗೊಂಡ ವಿಶಾಲ ಸಂಸ್ಕೃತಿಯೊಳಗೆ ಸಂಭವಿಸಿರುವುದನ್ನು ಸೂಚಿಸುತ್ತದೆ. ದಾಖಲಿತ ನಿಂದನೆಯು ಮಹಿಳೆಯರು ಮತ್ತು ಯುವತಿಯರ ಘನತೆ, ಸಹಾನುಭೂತಿ ಮತ್ತು ಪ್ರತ್ಯೇಕತೆಯನ್ನು ಕಸಿದುಕೊಳ್ಳುವ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರ ವಿರುದ್ದದ ಈ ದೌರ್ಜನ್ಯಗಳ ಪ್ರಮಾಣ, ಸ್ವರೂಪ, ವ್ಯವಸ್ಥಿತ ವಿಧಾನ ಮತ್ತು ದೇಶೀಯ ವ್ಯಾಪ್ತಿಯು ತೀವ್ರ ಗಂಭೀರವಾಗಿದ್ದು ಮಾನವೀಯತೆಯ ವಿರುದ್ದದ ಅಪರಾಧದ ಕಾನೂನು ಮಿತಿಯನ್ನು ಸಮಂಜಸವಾಗಿ ಪೂರೈಸಬಹುದು ಎಂದು ತಜ್ಞರು ಹೇಳಿದ್ದು ದಾಖಲೆಗಳಲ್ಲಿ ವಿವರಿಸಿರುವ ಅಪರಾಧಗಳ ಬಗ್ಗೆ ಸಮಗ್ರ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

ಎಪ್ಸ್ಟ್ರೀನ್ ಫೈಲ್‍ಗಳ ಬಿಡುಗಡೆಯು ಕಳೆದ ನವೆಂಬರ್‌ನಲ್ಲಿ ಅಮೆರಿಕದ ಸಂಸತ್ತು ಅನುಮೋದಿಸಿದ ಕಾನೂನನ್ನು ಅನುಸರಿಸುತ್ತದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಬಿಡುಗಡೆಯನ್ನು ಕಡ್ಡಾಯಗೊಳಿಸುತ್ತದೆ. ಆದರೆ ಗಂಭೀರ ಅನುಸರಣೆ ವೈಫಲ್ಯಗಳು ಮತ್ತು ದೋಷಪೂರಿತ ಪರಿಷ್ಕರಣೆ(ತಿದ್ದುಪಡಿ) ಬಲಿಪಶುಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ಕಾರಣವಾಗುತ್ತದೆ. ಇದುವರೆಗೆ 1,200ಕ್ಕೂ ಹೆಚ್ಚು ಬಲಿಪಶುಗಳನ್ನು ಗುರುತಿಸಲಾಗಿದೆ. ಮಾಹಿತಿಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ಅಥವಾ ತನಿಖೆಗಳನ್ನು ವಿಸ್ತರಿಸಲು ಇಷ್ಟವಿಲ್ಲದಿರುವುದು ಹಲವು ಸಂತ್ರಸ್ತರನ್ನು ಮತ್ತೆ ಆಘಾತಕ್ಕೆ ಮತ್ತು `ಸಾಂಸ್ಥಿಕ ಗ್ಯಾಸ್‍ಲೈಟಿಂಗ್'ಗೆ (ಬಲಿಪಶುಗಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಗುರಿ ಹೊಂದಿರುವ ತಂತ್ರ. ಬಲಿಪಶುಗಳು ಗೊಂದಲಕ್ಕೊಳಗಾಗುತ್ತಾರೆ, ಅಸುರಕ್ಷಿತರಾಗುತ್ತಾರೆ ಮತ್ತು ನಿರಂತರ ಕ್ಷಮೆ ಯಾಚಿಸುವಂತೆ ಮಾಡುವ ತಂತ್ರ) ಗುರಿಯಾಗಿಸಿದೆ ಎಂದು ವಿಶ್ವಸಂಸ್ಥೆ ನೇಮಿಸಿದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗ ಇಲಾಖೆಯು ಬಹಿರಂಗಪಡಿಸಿದ ದಾಖಲೆಗಳು ರಾಜಕೀಯ, ಹಣಕಾಸು, ಶೈಕ್ಷಣಿಕ ಮತ್ತು ವ್ಯವಹಾರ ಕ್ಷೇತ್ರದಲ್ಲಿನ ಪ್ರಭಾವೀ ವ್ಯಕ್ತಿಗಳೊಂದಿಗೆ ಎಪ್ಸ್ಟೀನ್ ಹೊಂದಿದ್ದ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿದೆ. ಲೈಂಗಿಕ ಅಪರಾಧ, ವೇಶ್ಯಾವಾಟಿಕೆ ಸಂಬಂಧಿತ ಆರೋಪದ ವಿಚಾರಣೆ ಎದುರಿಸುತ್ತಿದ್ದ ಎಪ್ಸ್ಟ್ರೀನ್ ನ್ಯೂಯಾರ್ಕ್ ಜೈಲಿನಲ್ಲಿ 2019ರಲ್ಲಿ ಮೃತಪಟ್ಟಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries