HEALTH TIPS

ಎ.ಐ ನಿಯಂತ್ರಿಸುವುದು ವಿಶ್ವಸಂಸ್ಥೆ ಕೆಲಸವಲ್ಲ: ಆಂಟೊನಿಯೊ ಗುಟೆರಸ್‌

ವಿಶ್ವಸಂಸ್ಥೆ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ನಿಯಂತ್ರಿಸುವುದು ಕೇವಲ ವಿಶ್ವಸಂಸ್ಥೆಯ ಕೆಲಸವಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

'ಎಲ್ಲಾ ದೇಶಗಳು, ಸರ್ಕಾರಗಳು, ಖಾಸಗಿ ವಲಯಗಳು ಹಾಗೂ ನಾಗರಿಕ ಸಮಾಜದ ಭಾಗವಹಿಸುವಿಕೆಯೊಂದಿಗೆ ವಿಶ್ವಸಂಸ್ಥೆಯಲ್ಲಿ ವಾರ್ಷಿಕ ಜಾಗತಿಕ ಸಂವಾದವನ್ನು ಆಯೋಜಿಸಲಾಗುತ್ತಿದೆ' ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.

ಕೃತಕ ಬುದ್ಧಿಮತ್ತೆ ಕುರಿತು ದಕ್ಷಿಣ ಜಗತ್ತಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ 'ಇಂಡಿಯಾ ಎ.ಐ ಇಂಪ್ಯಾಕ್ಟ್‌' ಶೃಂಗಸಭೆಯಲ್ಲಿ ಭಾಗವಹಿಸಲು ಗುಟೆರಸ್‌ ಅವರು ಶೀಘ್ರ ಭಾರತಕ್ಕೆ ಬರಲಿದ್ದಾರೆ.

ಎ.ಐ ಕುರಿತು ಜಾಗತಿಕ ಸಹಕಾರವನ್ನು ಗಮನದಲ್ಲಿರಿಸಿಕೊಂಡು ವಿಶ್ವಸಂಸ್ಥೆಯು ಪ್ರಯತ್ನಗಳನ್ನು ವಿವರಿಸಿದರು.

ಎ.ಐಗೆ ಸಂಬಂಧಿಸಿ ವಿಶ್ವಸಂಸ್ಥೆಯು ವಿವಿಧ ದೇಶಗಳ 40 ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries