ನಾಗರಿಕರಿಗೆ ಈ ಬಗ್ಗೆ ಮೊಬೈಲ್ ಸಂದೇಶ ರವಾನಿಸಿರುವ ಯುಎಇ ಗೃಹ ವ್ಯವಹಾರಗಳ ಸಚಿವಾಲಯ, ಸಮೀಪ ಇರುವ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಿರಿ ಎಂದು ಸೂಚಿಸಿದೆ.
'ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಂಭವನೀಯ ಕ್ಷಿಪಣಿ ದಾಳಿಯ ಭೀತಿಯಿದೆ. ದಯವಿಟ್ಟು ತಕ್ಷಣವೇ ಕಿಟಕಿಗಳು, ಬಾಗಿಲುಗಳು ಮತ್ತು ತೆರೆದ ಪ್ರದೇಶಗಳಿಂದ ದೂರವಿರಿ. ಸಮೀಪದ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯಿರಿ. ಮುಂದಿನ ಅಧಿಕೃತ ಸೂಚನೆಗಳಿಗಾಗಿ ಕಾಯಿರಿ' ಎಂದು ಸಂದೇಶ ಕಳುಹಿಸಿದೆ.

