HEALTH TIPS

ಇರಾನ್‌ನ ಯಾವ ನಗರಗಳ ಮೇಲೆ ಇಸ್ರೇಲ್, ಅಮೆರಿಕದಿಂದ ದಾಳಿ?

ಟೆಹರಾನ್‌: ರಾಜಧಾನಿ ಟೆಹರಾನ್‌ ಸೇರಿದಂತೆ ಇರಾನ್‌ನ 30ಕ್ಕೂ ಹೆಚ್ಚು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿವೆ ಎಂದು ವರದಿಯಾಗಿದೆ. ದಾಳಿಗೊಳಗಾದ ಪ್ರಮುಖ ನಗರಗಳ ವಿವರ ಇಲ್ಲಿದೆ...

ಟೆಹರಾನ್‌:

ರಾಜಧಾನಿ ಟೆಹರಾನ್‌ನ ಜಮ್ಹೂರಿ, ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಉತ್ತರ ಭಾಗದ ಸೈಯದ್ ಖಂದಾನ್ ಪ್ರದೇಶಗಳ ಮೇಲೆ ಇಸ್ರೇಲ್‌ ಕ್ಷಿಪಣಿಗಳು ಅಪ್ಪಳಿಸಿವೆ.

ಈ ಪ್ರದೇಶದಲ್ಲಿರುವ ಪರಮೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಇಸ್ಫಹಾನ್ ಮತ್ತು ನಟಾಂಜ್:

ಇರಾನ್‌ನ ಪ್ರಮುಖ ಅಣುಶಕ್ತಿ ಸಂಶೋಧನಾ ಕೇಂದ್ರಗಳು ಮತ್ತು ಮಿಲಿಟರಿ ಸಂಶೋಧನಾ ಸೌಲಭ್ಯಗಳಿರುವ ಈ ಪ್ರಾಂತ್ಯಗಳ ಮೇಲೆ ತೀವ್ರ ದಾಳಿ ನಡೆದಿದೆ. ಇವು ಇರಾನ್‌ನ ಅಣು ಯೋಜನೆಯ ಕೇಂದ್ರಬಿಂದುಗಳೆಂದು ಪರಿಗಣಿಸಲ್ಪಟ್ಟಿವೆ.

ಕರಜ್ ಮತ್ತು ಕಾಮ್:

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಪ್ರಮುಖ ನೆಲೆಗಳು ಮತ್ತು ಅತ್ಯಂತ ಸೂಕ್ಷ್ಮ ಮಿಲಿಟರಿ ಕೈಗಾರಿಕೆಗಳನ್ನು ಹೊಂದಿರುವ ಈ ನಗರಗಳ ಮೇಲೆಯೂ ದಾಳಿ ಮಾಡಲಾಗಿದೆ.

ಬುಶೆಹರ್:

ಬಂದರು ನಗರಿಯಾದ ಬುಶೆಹರ್ ಮೇಲೆ ನಡೆದ ದಾಳಿಯಲ್ಲಿ ಅಲ್ಲಿನ ಕೈಗಾರಿಕಾ ವಲಯಗಳಿಗೆ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ. ಆದರೆ, ಅಲ್ಲಿನ ಪರಮಾಣು ರಿಯಾಕ್ಟರ್‌ ಮೇಲೆ ಹಾನಿಯಾಗಿದೆಯೇ? ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries