ಕಾಸರಗೋಡು: ಬೆಂಗಳೂರಿನ ಸೈಂಟ್ ಕ್ಲಾರೆಟ್ ಕಾಲೇಜು(ಸ್ವಾಯತ್ತ)ವತಿಯಿಂದ ಹಮ್ಮಿಕೊಂಡ ರಾಷ್ಟ್ರಮಟ್ಟದ 'ಕ್ಲಾರೆಟ್ ಕಾವ್ಯ ಪ್ರಶಸ್ತಿ- 2025'ರ ಸ್ಪರ್ಧೆಯಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾರ್ಥಿ ಜ್ಯೋತಿರ್‍ಲಕ್ಷ್ಮಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಹುಮಾನ 5ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿದ್ದು, ಬೆಂಗಳೂರಿನ ಸೈಂಟ್ ಕ್ಲಾರೆಟ್ ಕಾಲೇಜಿನ ಮದರ್ ತೆರೆಸಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸ್ಪರ್ಧೆಗೆ ಒಟ್ಟು 130 ಕವನಗಳು ಪ್ರವೇಶವಾಗಿ ಬಂದಿದ್ದು, ಪ್ರಸಿದ್ಧ ವಿಮರ್ಶಕ ಎಚ್. ದಂಡಪ್ಪ ತೀರ್ಪುಗಾರರಾಗಿ ಸಹಕರಿಸಿದ್ದರು.


