ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್ನ ಜೈವಿಕ ವಿಜ್ಞಾನ ಶಾಲೆ ಮತ್ತು ಸೊಸೈಟಿ ಫಾರ್ ಮಾಲಿಕ್ಯುಲರ್ ಸಿಗ್ನಲಿಂಗ್ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಫೆ. 28ರಂದು ವಿಶ್ವ ವಿದ್ಯಾಲಯ ಕ್ಯಾಂಪಸ್‍ನಲ್ಲಿ ಆರಂಭಗೊಳ್ಳಲಿದೆ.
ಮೋಲಿಕ್ಯುಲರ್ ಸಿಗ್ನಲಿಂಗ್ (ಐಸಿಎಂಎಸ್ 2026) ವಿಷಯದ ಕುರಿತು ಆಯೋಜಿಸಿರುವ ಈ ಸಮ್ಮೇಳನ ಮ. 2ರ ವರೆಗೆ ನಡೆಯಲಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪೆÇ್ರ. ಪದ್ಮನಾಭನ್ ಬಲರಾಮ್ ಬೆಳಿಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟಿಸುವರು. ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಅಧ್ಯಕ್ಷತೆ ವಹಿಸುವರು. ಪೆÇ್ರ. ಸುಧಾ ಕಪ್ಪಳ್ಳಿ, ಪೆÇ್ರ. ವಿ.ಬಿ. ಸಮೀರ್ ಕುಮಾರ್, ಪೆÇ್ರ. ಜಿ. ಗೋವಿಂದ ರಾವ್, ಪೆÇ್ರ. ಎ.ಎಸ್. ರಾಘವೇಂದ್ರ ಮತ್ತು ಡಾ. ಪಿ.ಎ. ಸಿನು ಪಾಲ್ಗೊಳ್ಳುವರು. ಜೀವಕೋಶಗಳ ನಡುವೆ ಮತ್ತು ಅಂಗಗಳ ನಡುವಿನ ಸಂವಹನ ಪ್ರಕ್ರಿಯೆಗೆ ಸಂಬಂಧಿಸಿ, ವಿದೇಶಗಳಿಂದಲೂ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ವಿಜ್ಞಾನಿಗಳು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ.
ಒಟ್ಟು ಹತ್ತು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, 30 ಸಮಗ್ರ ಉಪನ್ಯಾಸಗಳು, 14 ಕಿರು ಉಪನ್ಯಾಸಗಳು ಮತ್ತು 12 ಮೌಖಿಕ ಪ್ರಸ್ತುತಿಗಳು ನಡೆಯಲಿವೆ. ಗುಜರಾತ್ ಜೈವಿಕ ತಂತ್ರಜ್ಞಾನ ವಿಶ್ವವಿದ್ಯಾಲಯದ ಮಹಾನಿರ್ದೇಶಕ ಡಾ. ಸುಬೀರ್ ಎಸ್. ಮಜುಂದಾರ್, ಐಎನ್‍ಎಸ್‍ಎ ಹಿರಿಯ ವಿಜ್ಞಾನಿ ಪೆÇ್ರ. ಎ.ಎಸ್. ರಾಘವೇಂದ್ರ, ರಾಷ್ಟ್ರೀಯ ಸಂಸ್ಥೆ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಆರೋಗ್ಯ ಸಂಶೋಧನಾ ಜ್ಞಾನಿ ಜಿ. ಡಾ. ಶ್ರಬಾನಿ ಮುಖರ್ಜಿ ಮತ್ತು ಪ್ರಾಧ್ಯಾಪಕ ಡಾ. ಎಂ. ವಿಜಯನ್ ಅವರಿಂದ ಉಪನ್ಯಾಸ ನಡೆಯಲಿವೆ. ಮಾರ್ಚ್ 2 ರಂದು ಸಂಜೆ 4.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪೆÇ್ರ. ಪಿ. ಅಪ್ಪಾ ರಾವ್ ಅವರು ಸಮಾರೋಪ ಭಾಷಣ ಮಾಡುವರು. ಸಂಘಟನಾ ಕಾರ್ಯದರ್ಶಿ ಡಾ. ಇಂದ್ರಶಿಶ್ ಭಟ್ಟಾಚಾರ್ಯ ವರದಿ ಮಂಡಿಸುವರು.

