ಕಾಸರಗೋಡು: ನ್ಯಾಯ ಅರಸಿ ಬರುವ ಜನಸಾಮಾನ್ಯರಿಗೆ ನ್ಯಾಯಾಲಯಗಳು ವಿಶ್ವಾಸಾರ್ಹ ಆಶ್ರಯತಾಣಗಳಾಗಿರುವುದಲ್ಲದೆ, ಕಟ್ಟಕಡೆಯ ಮನುಷ್ಯರಿದೆ ಆಶಾಕಿರಣವಾಗಿರುವುದಾಗಿ ಕೇರಳ ಹೈಕೋರ್ಟ್‍ನ ನ್ಯಾಯಮೂರ್ತಿ ಕೌಸರ್ ಇಡಪಗತ್ತ್ ತಿಳಿಸಿದ್ದಾರೆ.
ಅವರು ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನೂತನ ಸಮುಚ್ಛಯಕ್ಕೆ ಶಿಲಾನ್ಯಾಸ ನಡೆಸಿ ಮಾತನಾಡಿದರು. ನ್ಯಾಯ ವಿತರಣೆಯಲ್ಲಿನ ವಿಳಂಬ ಮತ್ತು ಇದಕ್ಕೆ ಕಾರಣವಾಗಿರುವ ತೊಡಕುಗಳು ಭಾರತೀಯ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿದೆ. ಪೆÇೀಕ್ಸೊ ಪ್ರಕರಣ ಹಾಗೂ ಮಹಿಳೆಯರ ಮೇಲಿನ ಅಪರಾಧಗಳ ವಿಚಾರಣೆಗೆ ವಿಶೇಷ ಕೊಠಡಿಗಳ ಅಗತ್ಯವಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಸಕಾಲಕ್ಕೆ ಪೂರ್ಣಗೊಳಿಸಲು ಸಾಧ್ಯವಾದರೆ, ಅದು ಕಾಸರಗೋಡು ಜಿಲ್ಲಾ ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚಿನ ಬಲ ತಂದುಕೊಡಲಿರುವುದಾಗಿ ತಿಳಿಸಿದರು.
ಪ್ರ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಎ.ಎ. ಜಿಯಾದ್ ರೆಹಮಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಜಗದೀಶ್ ವರದಿ ಮಂಡಿಸಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ.ನೆಲ್ಲಿಕುನ್ನು, ಕಾಸರಗೋಡು ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ವೇಣುಗೋಪಾಲನ್ ನಾಯರ್, ಕಾಸರಗೋಡು ವಕೀಲರ ಸಂಘದ ಅಧ್ಯಕ್ಷ ಎ.ಗೋಪಾಲನ್ ನಾಯರ್, ಹೊಸದುರ್ಗ ವಕೀಲರ ಸಂಘದ ಅಧ್ಯಕ್ಷ ಪಿ.ನಾರಾಯಣನ್ ಮತ್ತು ಕಾಸರಗೋಡು ವಕೀಲರ ಕ್ಲರ್ಕ್‍ಗಳ ಸಂಘಟನೆ ಅಧ್ಯಕ್ಷ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ಕಾಸರಗೋಡು ವಕೀಲರ ಸಂಘದ ಕಾರ್ಯದರ್ಶಿ ಪ್ರದೀಪ್ ರಾವ್ ಮೆಪೆÇ್ಪೀಡ್ ಸ್ವಾಗತಿಸಿದರು. ಕಾಸರಗೋಡು ವಕೀಲರ ಸಂಘದ ಉಪಾಧ್ಯಕ್ಷ ಕೆ. ವಿನೋದ್ ಕುಮಾರ್ ವಂದಿಸಿದರು.



