ಕಾಸರಗೋಡು: ಕೇರಳ ವ್ಯಾಪಕ ಬಿಜೆಪಿ ನೇತೃತ್ವದ ಎನ್.ಡಿಎ ವತಿಯಿಂದ ಚುನಾವಣಾ ಪ್ರಚಾರಕ್ಕೆ ಬಹಿರಂಗ ಚಾಲನೆ ನೀಡುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಮಟ್ಟದ ಪ್ರಚಾರ ಆರಂಭಿಸಲಾಯಿತು. ಕಾಸರಗೋಡು ನಗರದ ಕೃಷ್ಣಾ ಚಿತ್ರ ಮಂದಿರ ಸನಿಹ ಗೋಡೆ ಬರಹ ಬರೆಯುವ ಮೂಲಕ ಬಿಜೆಪಿ ಮುಖಂಡ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಪ್ರಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್. ಬಾಬುರಾಜ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಮುಖಂಡರಾದ ಪ್ರಮೀಳಾ ಮಜಲ್, ಸುಕುಮಾರ ಕುದ್ರೆಪಾಡಿ, ವೀಣಾ ಅರುಣ್ ಶೆಟ್ಟಿ, ಬದಿಯಡ್ಕ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎಂ, ಎನ್. ಸತೀಶ್, ವರಪ್ರಸಾದ್ ಕೋಟೆಕಣಿ, ಅನಿತಾ ನಾಯ್ಕ್, ಅಶೋಕ್ ಚೆಟ್ಟಿಯಾರ್, ಕಿಶೋರ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

