ಲಂಡನ್: ಆನ್‍ಲೈನ್‍ನಲ್ಲಿ ಮಕ್ಕಳ ಸುರಕ್ಷತೆಯನ್ನು ಬಲಪಡಿಸಲು ಟೆಕ್ ಫ್ಲ್ಯಾಟ್‍ಫಾರ್ಮ್‍ಗಳು ಹಾನಿಕಾರಕ ವಿಷಯಗಳಿಗೆ ಸಂಪೂರ್ಣ ಜವಾಬ್ದಾರರಾಗಿರುವುದನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಕ್ರಮಗಳ ಪ್ಯಾಕೇಜ್ ಅನ್ನು ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ನೇತೃತ್ವದ ಬ್ರಿಟನ್ ಸರ್ಕಾರ ಘೋಷಿಸಿದೆ.
ಇದು ಕಾನೂನು ಲೋಪದೋಷಗಳನ್ನು ಮುಚ್ಚುವುದರಿಂದ ಎಲ್ಲಾ ಎಐ(ಕೃತಕ ಬುದ್ದಿಮತ್ತೆ) ಚಾಟ್‍ಬಾಟ್ ಪೂರೈಕೆದಾರರು ಆನ್‍ಲೈನ್ ಸುರಕ್ಷಾ ಕಾಯ್ದೆಗಳನ್ನು ಅನುಸರಿಸಬೇಕಾಗುತ್ತದೆ. ಈ ಕ್ರಮವು ಕಾನೂನುಬಾಹಿರ ಅಥವಾ ಅಪಾಯಕಾರಿ ವಿಷಯಗಳ ವಿರುದ್ದ ತ್ವರಿತವಾಗಿ ಕಾರ್ಯನಿರ್ವಹಿಸಲು ನಿಯಂತ್ರಕರಿಗೆ ಸ್ಪಷ್ಟ ಅಧಿಕಾರವನ್ನು ನೀಡುತ್ತದೆ ಮತ್ತು ಮಕ್ಕಳ ಡಿಜಿಟಲ್ ಹಿತಚಿಂತನೆ ಸಮಾಲೋಚನೆಯ ಪ್ರಸ್ತಾಪಗಳ ಮೇಲೆ ತ್ವರಿತ ಕ್ರಮಕ್ಕೆ ಅಡಿಪಾಯ ಹಾಕುತ್ತದೆ.
ಸಾಮಾಜಿಕ ಮಾಧ್ಯಮಗಳಿಗೆ ಕನಿಷ್ಠ ವಯಸ್ಸನ್ನು ನಿಗದಿ ಪಡಿಸುವುದು, ವ್ಯಸನಕಾರಿ ವೈಶಿಷ್ಟ್ಯಗಳನ್ನು ನಿರ್ಬಂಧಿಸುವುದು, ಎಐ ಚಾಟ್‍ಬಾಟ್‍ಗಳನ್ನು ಬಳಸುವುದಕ್ಕೆ ಮಕ್ಕಳ ವಯಸ್ಸನ್ನು ನಿಗದಿಪಡಿಸುವುದು ಇತ್ಯಾದಿ ಆಯ್ಕೆಗಳನ್ನು ಈ ಪ್ರಸ್ತಾಪ ಹೊಂದಿದೆ.

