HEALTH TIPS

ಕೆಎಸ್‍ಯುನಿಂದ ಪಿಎಸ್‍ಸಿ ಕಚೇರಿಗೆ ಮುತ್ತಿಗೆ ಯತ್ನ-ಕೇಸು

ಕಾಸರಗೋಡು: ರಾಜ್ಯ ಸರ್ಕಾರ ಲೋಕಸೇವಾ ಆಯೋಗ(ಪಿಎಸ್‍ಸಿ)ವನ್ನು ಕೇವಲ ಪ್ರದರ್ಶನ ಕೇಂದ್ರವನ್ನಾಗಿಸುತ್ತಿದ್ದು, ಉದ್ಯೋಗಾರ್ಥಿಗಳಿಗೆ ವಮಚನೆಯೆಸಗುತ್ತಿರುವುದಾಗಿ ಆರೋಪಿಸಿ, ಕಾಂಗ್ರೆಸ್ ಅಧೀನದ ವಿದ್ಯಾರ್ಥಿ ಸಂಘಟನೆ ಕೆಎಸ್‍ಯು ವತಿಯಿಂದ ಕಾಸರಗೋಡಿನ ಪಿಎಸ್‍ಸಿ ಕಚೇರಿಗೆ ಬೀಗ ಜಡಿಯುವ ಪ್ರತಿಭಟನೆ ಹಮ್ಮಿಕೊಂಡಿತು. 

ಕೆಎಸ್‍ಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿಹಲವು ಮಂದಿ ಕಾರ್ಯಕರ್ತರು ಮೆರವಣಿಗೆ ಮೂಲಕ ಆಗಮಿಸಿ ಪಿಎಸ್‍ಸಿ ಕಚೇರಿಗೆ ಬೀಗ ಜಡಿಯಲು ಮುಂದಾಗುತ್ತಿದ್ದಂತೆ ಪೊಲೀಸರು ಇವರನ್ನು ತಡೆದಿದ್ದಾರೆ. ಕೆಎಸ್‍ಯು ಜಿಲ್ಲಾಧ್ಯಕ್ಷ ಜವಾದ್ ಪುತ್ತೂರ್, ಪದಾಧಿಕಾರಿಗಳಾದ ನುಹ್‍ಮಾನ್ ಪಳ್ಳಂಗೋಡು, ಮಹಮ್ಮದ್ ಸಜ, ತ್ವಯೀಜ್, ಅನ್ಸಾರಿ ಕೋಟೆಕುನ್ನು, ವಿಷ್ಣು ಇರಿಯಣ್ಣಿ ಮೊದಲಾದವರು ನೇತೃತ್ವ ನಿಡಿದರು. 

ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕೆಎಸ್‍ಯು ಕಾರ್ಯಕರ್ತರಾದ ಸಿ.ಎಂ ಮಹಮ್ಮದ್ ಜವಾದ್ ಸೇರಿದಂತೆ 11ಮಂದಿ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries