HEALTH TIPS

ಅಮೆರಿಕ-ಭಾರತ ಒಪ್ಪಂದ: ರೈತರು, ಎಂಎಸ್‌ಎಂಇ ಹಿತಾಸಕ್ತಿಗೆ ಹಾನಿ ಇಲ್ಲ-ಪಿಯೂಷ್

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಟಿದೆ. ಈ ಸಂಬಂಧ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕೃಷಿ ಉತ್ಪನ್ನಗಳು ಸೇರಿದಂತೆ ಭಾರತದ ಸರಕುಗಳ ಮೇಲೆ ಶೂನ್ಯ ಸುಂಕ ನೀತಿ ಹೊಂದಿದೆ ಎಂದು ಗೋಯಲ್‌ ತಿಳಿಸಿದ್ದಾರೆ.

ವ್ಯಾಪಾರ ಒಪ್ಪಂದದಲ್ಲಿ ವಾಹನ ಮತ್ತು ವಿಮಾನ ಬಿಡಿಭಾಗಗಳು ಸೇರಿದಂತೆ ಇನ್ನಿತರೆ ವಸ್ತುಗಳ ಮೇಲೆ ಸುಂಕ ರಹಿತ ರಫ್ತು ವ್ಯವಸ್ಥೆ ಒದಗಿಸಲಾಗಿದೆ. ಕೃಷಿ ಹಾಗೂ ಡೇರಿ ಉತ್ಪನ್ನಗಳು ಸೇರಿದಂತೆ ಮೆಕ್ಕೆಜೋಳ, ಗೋಧಿ, ಅಕ್ಕಿ, ಸೋಯಾ, ಹಾಲು, ಚೀಸ್, ಎಥೆನಾಲ್ (ಇಂಧನ), ತಂಬಾಕು, ಮಾಂಸ ಹಾಗೂ ನಿರ್ದಿಷ್ಟ ತರಕಾರಿಗಳಿಗೆ ಸಂಬಂಧಿಸಿದಂತೆ ಅಮೆರಿಕಕ್ಕೆ ಯಾವುದೇ ಸುಂಕ ರಿಯಾಯಿತಿ ಇರುವುದಿಲ್ಲ ಎಂದು ಗೋಯಲ್‌ ಹೇಳಿದ್ದಾರೆ.

ಭಾರತವು ಸೋಯಾಬೀನ್ ಎಣ್ಣೆಯಲ್ಲಿ ಕೋಟಾ ಆಧಾರಿತ ಸುಂಕ ರಿಯಾಯಿತಿಗಳನ್ನು ನೀಡಲಾಗಿದೆ. ಮದ್ಯ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸರಕುಗಳು ಸೇರಿದಂತೆ ಸೌಂದರ್ಯವರ್ಧಕಗಳ ಮೇಲೆ ಅಮೆರಿಕಕ್ಕೆ ಸುಂಕ ರಿಯಾಯಿತಿ ನೀಡಲಾಗಿದೆ.

ಅಮೆರಿಕದೊಂದಿಗಿನ ಒಪ್ಪಂದದಿಂದ ರೈತರು, ಎಂಎಸ್‌ಎಂಇ, ಕರಕುಶಲ ವಸ್ತುಗಳು, ಕೈಮಗ್ಗಗಳ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗುವುದಿಲ್ಲ ಎಂದು ಪಿಯೂಷ್ ಹೇಳಿದ್ದಾರೆ.

ಆತ್ಮನಿರ್ಭರ ಭಾರತದ ಭಾಗವಾಗಿರುವ ಉತ್ಪನ್ನಗಳನ್ನು ಅಮೆರಿಕ-ಭಾರತ ಒಪ್ಪಂದದಿಂದ ಹೊರಗಿಡಲಾಗಿದೆ ಎಂದು ಪಿಯೂಷ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries