HEALTH TIPS

ಮನ್ ಕೀ ಬಾತ್‌ನಲ್ಲಿ ಕೇರಳದ ತಿರುಮಾಮಯ 'ಮಾಮಾಂಗಂ' ಉತ್ಸವ ಪರಂಪರೆಯನ್ನು ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ: ಕೇರಳ ಕುಂಭಮೇಳವೆಂದು ಕರೆಯಲ್ಪಡುವ ಶತಮಾನಗಳಷ್ಟು ಪುರಾತನವಾದ ತಿರುವಾಮಯ ಮಾಮಾಂಗಂ ಉತ್ಸವ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ, ಅವರ ಬಾನುಲಿ ಭಾಷಣ ' ಮನ್‌ಕೀ ಬಾತ್'ನಲ್ಲಿ ಪ್ರಸ್ತಾವಿಸಿದ್ದಾರೆ. ಉತ್ತರದಿಂದ ದಕ್ಷಿಣದವರೆಗೆ ನದಿಗಳು ವಿಭಿನ್ನವಾಗಿರಬಹುದು.

ಆದರೆ ನಂಬಿಕೆಯ ಹರಿವು ಮಾತ್ರ ಒಂದೇ ರೀತಿಯದ್ದಾಗಿದೆ ಎಂದವರು ಹೇಳಿದ್ದಾರೆ.

''ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಳೆದ ವರ್ಷ ನಡೆದ ಮಹಾಕುಂಭಮೇಳದ ಅಮೋಘ ದೃಶ್ಯಗಳನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ತ್ರಿವೇಣಿ ಸಂಗಮದ ದಡಗಳಲ್ಲಿ ಜನಸಾಗರವೇ ಹರಿದುಬರುತ್ತಿರುವುದು, ನಂಬಿಕೆಯ ಅಗಾಧವಾದ ಹರಿವು, ಕುಂಭಮೇಳ ಸ್ನಾನದ ಪವಿತ್ರಕ್ಷಣಗಳು, ಇವೆಲ್ಲವೂ ಭಾರತವು ಸನಾತನ ಚೇತನದೊಂದಿಗೆ ಬೆಸೆದುಕೊಂಡಿರುವುದನ್ನು ತೋರಿಸುತ್ತದೆ'' ಎಂದರು.

''ಅದೇ ಮಹಾಕುಂಭವು ಮಾಘಮಾಸದಲ್ಲಿ, ಅದೇ ರೀತಿಯ ಭಕ್ತಿಯ ಧ್ವನಿಯೊಂದಿಗೆ ಉತ್ತರದಿಂದ ದಕ್ಷಿಣಕ್ಕೆ ಹೊಸ ಗುರುತಿನೊಂದಿಗೆ ಹರಿದುಬರುತ್ತದೆ. ಕೇರಳ ನಾಡಿನಲ್ಲಿ, ಭರತಪುಳ ನದಿಯ ದಡದಲ್ಲಿರುವ ತಿರುನಾವಯದಲ್ಲಿ ಮಾಮಾಂಗಂ ಎಂಬ ಶತಮಾನಗಳಷ್ಟು ಪುರಾತನವಾದ ಪರಂಪರೆಯೊಂದಿದೆ.ಬಹಳಷ್ಟು ಮಂದಿ ಅದನ್ನು ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮಹಾಮಾಘ ಉತ್ಸವ ಅಥವಾ ಕೇರಳ ಕುಂಭವೆಂಬುದಾಗಿಯೂ ಕರೆಯುತ್ತಿದ್ದರು''.

'' ಆದರೆ ಕಾಲಾನಂತರ ಈ ಪರಂಪರೆಯು ಕಣ್ಮರೆಯಾಗಿದೆ. ಸುಮಾರು 250 ವರ್ಷಗಳಿಂದ ಈ ಉತ್ಸವ ಅದ್ದೂರಿಯಾಗಿ ಆಚಣೆಯಾಗುತ್ತಿರಲಿಲ್ಲ. ಆದರೆ ಇಂದು ನಮ್ಮ ದೇಶವು, ಅದರ ಪರಂಪರೆಯನ್ನು , ಇತಿಹಾಸಕ್ಕೆ ಮರುಮಾನ್ಯತೆ ನೀಡುತ್ತಿದೆ. ಈ ಸಲದ ಕೇರಳ ಕುಂಭಮೇಳವು ಯಾವುದೇ ಪ್ರಚಾರವಿಲ್ಲದಿದ್ದರೂ ಯಶಸ್ವಿಯಾಗಿ ನಡೆಯಿತು ಎಂದರು.

ಈ ಉತ್ಸವದ ಕುರಿತಾಗಿ ಜನರು ಪರಸ್ಪರ ಮಾತನಾಡಿಕೊಂಡರು, ಕ್ರ ಮೇಣ ವಿಷಯವು ಹರಡುತ್ತಾಹೋಗಿ, ಭಕ್ತಾದಿಗಳು ಪ್ರತಿದಿನವೂ ತಿರುನಾವಯಕ್ಕೆ ಬರತೊಡಗಿದರು.

ಮಹಾಕುಂಭಮೇಳವಾಗಿರಲಿ ಅಥವಾ ಕೇರಳಕುಂಭಮೇಳವಾಗಿರಲಿ ಇದು ಕೇವಲ ಸ್ನಾನದ ಉತ್ಸವವವಲ್ಲ, ಇದು ನೆನಪನ್ನು ಉದ್ದೀಪನಗೊಳಿಸುವ ಕ್ಷಣವಾಗಿದೆ. ಇದೊಂದು ಸಂಸ್ಕೃತಿಯ ಪುನರ್‌ಸ್ಮರಣೆಯಾಗಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries