HEALTH TIPS

ಶ್ರೀಲಂಕಾ: ಸಂಸದರ ಪಿಂಚಣಿ ರದ್ದು

ಕೊಲಂಬೊ: ಸಂಸದರ ಪಿಂಚಣಿ ರದ್ದುಗೊಳಿಸಿ ಶ್ರೀಲಂಕಾ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಯನ್ನು ಈ ಮೂಲಕ ಈಡೇರಿಸಿದಂತಾಗಿದೆ.

ಐದು ವರ್ಷದ ಅವಧಿ ಪೂರ್ಣಗೊಳಿಸಿದ ಸಂಸದರಿಗೆ ಪಿಂಚಣಿ ಪಡೆಯುವ ಅರ್ಹತೆ ಇದೆ.

ಶ್ರೀಲಂಕಾ ಸರ್ಕಾರವು ಸಂಸದರ ಪಿಂಚಣಿ (ರದ್ದತಿ) ಕಾಯ್ದೆಯನ್ನು ಮಂಗಳವಾರ ಬಹುಮತದೊಂದಿಗೆ ಅಂಗೀಕರಿಸಿತು. 225 ಸದಸ್ಯ ಬಲದ ಸಂಸತ್‌ನಲ್ಲಿ 154 ಮತಗಳಿಂದ ಮಸೂದೆ ಅಂಗೀಕರಿಸಲಾಯಿತು. ಇಬ್ಬರು ಸಂಸದರು ವಿರೋಧವಾಗಿ ಮತ ಚಲಾಯಿಸಿದರು. ಉಳಿದವರು ಗೈರಾಗಿದ್ದರು.

ಸಂಸದರ ಪಿಂಚಣಿ (ರದ್ದತಿ) ಮಸೂದೆಯನ್ನು ಸರಳ ಬಹುಮತದೊಂದಿಗೆ ಅಂಗೀಕರಿಸಬಹುದು ಎಂದು ಫೆ. 6ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries