HEALTH TIPS

ಎ.ಐ ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್: ಎ‍ಪ್ಸ್ಟೀನ್ ಫೈಲ್ಸ್ ವಿವಾದ ಕಾರಣ ?

ನವದೆಹಲಿ: ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಎ.ಐ ಶೃಂಗಸಭೆಯಿಂದ ಹೊರಗುಳಿದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 

ನವದೆಹಲಿಯಲ್ಲಿ ಫೆ.16 ರಿಂದ ಫೆ.20ರವರೆಗೆ ಅಂತರರಾಷ್ಟ್ರೀಯ ಮಟ್ಟದ ಎ.ಐ ಶೃಂಗಸಭೆ ನಡೆಯುತ್ತಿದೆ.

ಇದರಲ್ಲಿ ಜಗತ್ತಿನ ಪ್ರಮುಖ ಉದ್ಯಮಿಗಳು, ತಂತ್ರಜ್ಞಾನ ನಿಪುಣರು, ರಾಜಕೀಯ ನಾಯಕರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.

ಬಿಲ್ ಗೇಟ್ಸ್ ಅವರು ಆಂಧ್ರಪ್ರದೇಶ ಪ್ರವಾಸದಲ್ಲಿದ್ದಾರೆ. ಫೆ.19ರಂದು ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಎ.ಐ. ಶೃಂಗಸಭೆಯ ಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಶೃಂಗಸಭೆಯಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಅವರ ಹೆಸರು ಕಾಣುತ್ತಿಲ್ಲ.

ಎ‍ಪ್ಸ್ಟೀನ್ ಫೈಲ್ಸ್ ವಿವಾದದ ಕಾರಣ, ಬಿಲ್ ಗೇಟ್ಸ್‌ ಅವರು ಎ.ಐ ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ.

ಎ‍ಪ್ಸ್ಟೀನ್ ಫೈಲ್ಸ್‌ನಲ್ಲಿ ಬಿಲ್ ಗೇಟ್ಸ್‌ ಅವರ ಹೆಸರು ಕೇಳಿಬಂದಿತ್ತು. ಆದರೆ, ಇದು ಸಂಪೂರ್ಣವಾಗಿ ಅಸಂಬದ್ಧ ಎಂದು ಅವರ ವಕ್ತಾರ ಹೇಳಿಕೆ ನೀಡಿದ್ದರು.

ಎ.ಐ ಶೃಂಗಸಭೆಯಲ್ಲಿ ಭಾಗವಹಿಸಬೇಕಿದ್ದ ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಕೂಡ ಕೊನೆ ಕ್ಷಣದಲ್ಲಿ ಭಾರತದ ಪ್ರವಾಸವನ್ನು ರದ್ದು ಮಾಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries