HEALTH TIPS

ಅದ್ನಾನ್ ಸಮಿ ಜೊತೆ ಊಟ: ಆರೆಸ್ಸೆಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮುಂಬೈ: ಪಾಕ್ ಮೂಲದ ಗಾಯಕ-ಸಂಗೀತ ಸಂಯೋಜಕ ಅದ್ನಾನ್ ಸಮಿ ಜೊತೆ ಊಟ ಮಾಡಿದ್ದಕ್ಕಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಸೋಮವಾರ ಟೀಕಿಸಿರುವ ಮಹಾರಾಷ್ಟ್ರ ಕಾಂಗ್ರೆಸ್, ಅದು ರಾಷ್ಟ್ರವಿರೋಧಿ ಕೃತ್ಯಕ್ಕೆ ಸಮನಾಗಿದೆ ಎಂದು ಆರೋಪಿಸಿದೆ.

ಆರೆಸ್ಸೆಸ್‌ನ ಶತಾಬ್ದಿ ಅಂಗವಾಗಿ ವಾರಾಂತ್ಯದಲ್ಲಿ ಮುಂಬೈನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೆಲೆಬ್ರಿಟಿಗಳಲ್ಲಿ ಸಮಿ ಸೇರಿದ್ದರು.

'ಸಮಿ ತಂದೆ ಅರ್ಷದ್ ಸಮಿ ಖಾನ್ ಪಾಕಿಸ್ತಾನದ ವಾಯುಪಡೆಯಲ್ಲಿ ಪೈಲಟ್ ಆಗಿದ್ದರು ಮತ್ತು 1965ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಠಾಣಕೋಟ ವಾಯುನೆಲೆಯ ಮೇಲೆ ದಾಳಿ ನಡೆಸಿ ಅದನ್ನು ನಾಶಗೊಳಿಸಿದ್ದರು. ಇಂದು ಭಾಗವತ ಸಮಿ ಜೊತೆ ಊಟವನ್ನು ಆನಂದಿಸುತ್ತಿದ್ದಾರೆ. ಆರೆಸ್ಸೆಸ್=ರಾಷ್ಟ್ರವಿರೋಧಿ' ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.

ರವಿವಾರ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಭಾಗವತ್‌ ಅವರೊಂದಿಗಿನ ಛಾಯಾಚಿತ್ರಗಳನ್ನು ಹಂಚಿಕೊಂಡಿರುವ ಸಮಿ, 'ಆರೆಸ್ಸೆಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರೊಂದಿಗೆ ಕಳೆದ ಮಧ್ಯಾಹ್ನ ಅದ್ಭುತವಾಗಿತ್ತು. ಅವರ ಭಾಷಣವನ್ನು ಕೇಳುವುದು ಸಂತೋಷದಾಯಕವಾಗಿತ್ತು. ಸಂಘದ ಕುರಿತು ಹಲವಾರು ಮಿಥ್ಯೆಗಳು ಮತ್ತು ತಪ್ಪುಕಲ್ಪನೆಗಳನ್ನು ಅವರು ನಿರರ್ಗಳವಾಗಿ ವಿವರಿಸಿದರು ಮತ್ತು ಅವುಗಳನ್ನು ನಿವಾರಿಸಿದರು. ಅವರು ಅದ್ಭುತ ಮತ್ತು ಹೃದಯವಂತ ವ್ಯಕ್ತಿ' ಎಂದು ಪ್ರಶಂಸಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries