ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ನೀರ್ಚಾಲು 3ನೇ ವಾರ್ಡಿನ ಗ್ರಾಮಸಭೆ ಶನಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಜರಗಿತು. ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿ ಮಾತನಾಡಿ, ಊರಿನ ಅಭಿವೃದ್ಧಿ ಕಾರ್ಯಗಳ ರೂಪುರೇಷೆಯನ್ನು ತಯಾರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಗ್ರಾಮಸಭೆಗಳಲ್ಲಿ ಜನರ ಸಹಭಾಗಿತ್ವ ಅತೀ ಅಗತ್ಯ. ನಾಡಿನ ಜನರಿಗಾಗಿ ಇರುವ ಕಾರ್ಯಕ್ರಮವನ್ನು ಜನರೇ ಯಶಸ್ವಿಗೊಳಿಸಬೇಕು. ಅಭಿವೃದ್ಧಿಗೆ ಪೂರಕವಾದ ಎಲ್ಲಾ ಚಟುವಟಿಕೆಗಳಿಗೂ ಆಡಳಿತ ಮಂಡಳಿ ಸದಾ ಜನರೊಂದಿಗೆ ಇದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ ವಳಮಲೆ, ಸದಸ್ಯರುಗಳಾದ ಬಿಂದ್ಯಾ, ಹರೀಶ ಮಜಿರ್ಪಳ್ಳಕಟ್ಟೆ, ಅನ್ನತ್ ಬೀವಿ ಪಾಡಲಡ್ಕ, ಎನ್.ಆರ್.ಜಿ ವಿಭಾಗದ ಸತೀಶ್, ಅಂಗನವಾಡಿ ಅಧ್ಯಾಪಿಕೆಯರು, ಆಶಾ ಕಾರ್ಯಕರ್ತೆಯರು, ಹಸಿರು ಕ್ರಿಯಾಸೇನೆ, ಉದ್ಯೋಗ ಖಾತರಿಯ ಸದಸ್ಯರು, ಕೃಷಿಕರು ಪಾಲ್ಗೊಂಡಿದ್ದರು. ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಸ್ವಾಗತಿಸಿ, ಗ್ರಾಮಸಭೆಯ ಸಂಚಾಲಕಿ ಹೈಮಾವತಿ ವಂದಿಸಿದರು.

.jpg)
