HEALTH TIPS

ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಯಾವುದೇ ಒಕ್ಕೂಟಕ್ಕೂ ಬೆಂಬಲ ಘೋಷಿಸಿಲ್ಲ- ಕೆವಿವಿಇಎಸ್ ಜಿಲ್ಲಾ ಕೌನ್ಸಿಲ್

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಘೋಷಿತ ನಿಲುವುಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಸನ್ನಿವೇಶ ಈಗ ಇಲ್ಲ ಎಂದು, ಸಂಘಟನೆ ನಿಷ್ಪಕ್ಷ ನಿಲುವಿನಲ್ಲಿ ಗಟ್ಟಿಯಾಗಿ ನಿಲ್ಲಲು ಕೆವಿವಿಇಎಸ್ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸಭೆ ತೀರ್ಮಾನಿಸಿದೆ. ಎಲ್ಲಾ ಧರ್ಮಗಳಲ್ಲೂ, ಜಾತಿಯಲ್ಲೂ, ರಾಜಕೀಯಕ್ಕೊಳಪಟ್ಟವರು ಸಂಘಟನೆಯ ಸದಸ್ಯರಾಗಿದ್ದಾರೆ. ಸಂಘಟನೆ ರೂಪೀಕೃತಗೊಂಡ ಕಾಲದಿಂದ ಆರಂಭಿಸಿ ಇದುವರೆಗೆ ಸ್ವತಂತ್ರವಾದ ರಾಜಕೀಯ ನಿಲುವುಗಳನ್ನು ಸಂಘಟನೆ ಸ್ವೀಕರಿಸಿದೆ. ಚುನಾವಣೆಗಳಲ್ಲಿ ಸದಸ್ಯರಿಗೆ ಅವರವರ ರಾಜಕೀಯ ನಿಲುವುಗಳನ್ನು ಹೊಂದಬ ಹುದು. ಅದರ ಜೊತೆಗೆ ಸಂಘಟನೆಯ ಸಾರ್ವಜನಿಕ ನಿಲುವು, ಐಕ್ಯವನ್ನು ಹಾನಿಗೊಳಿಸದ ರೀತಿಯಲ್ಲಿ ವ್ಯಾಪಾರಿ ಗಳನ್ನು, ವ್ಯಾಪಾರಿ ಸಮೂಹದೊಂದಿಗೆ ನಿಕಟ ಸಂಪರ್ಕ ಹೊಂದಿರುವ ವ್ಯಾಪಾರಿ ಮುಖಂಡರನ್ನು ಪ್ರಧಾನ ಹುದ್ದೆಗಳಿಗೆ ತಲುಪಿಸಲು ಪ್ರಯತ್ನಿಸಲಾಗುವುದು ಎಂದು ಕೌನ್ಸಿಲ್ ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು. 

ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದರು. ಟ್ರೇಡರ್ಸ್ ಫ್ಯಾಮಿಲಿ ವೆಲ್ಫೇರ್ ಬೆನಿಫಿಟ್ ಸ್ಕೀಂನ ಮರಣಾ ನಂತರ ಧನಸಹಾಯ ವನ್ನು ೫ ಲಕ್ಷ ರೂ. ಆಗಿ ಹೆಚ್ಚಿಸಿರುವುದರ ವಿತರಣೆ ಉದ್ಘಾಟನೆಯನ್ನು ರಾಜ್ಯ  ಉಪಾಧ್ಯಕ್ಷ ಕೆ.ವಿ. ಅಬ್ದುಲ್ ಹಮೀದ್ ನಿರ್ವಹಿಸಿದರು. ಇದುವರೆಗೆ ೧೧ ಕೋಟಿ ಯಷ್ಟು ರೂ. ೨೯೦ ವ್ಯಾಪಾರಿ ಕುಟುಂಬ ಗಳಿಗೆ ನೀಡಲು ಯೋಜನೆಯ ಮೂಲಕ ಸಾಧ್ಯವಾಗಿದೆ. ಜಿಲ್ಲಾ ಉಪಾಧ್ಯಕ್ಷರಾದ ಪಿ.ಪಿ. ಮುಸ್ತಫ, ಹಂಸ ಪಾಲಕ್ಕಿ, ಶಿಹಾಬ್ ಉಸ್ಮಾನ್, ಥೋಮಸ್ ಕಾನಾಟ್, ಬಶೀರ್ ಕನಿಲ, ಸಿ.ಎಚ್. ಅಬ್ದುಲ್ ರಹಿಮಾನ್, ಜಿಲ್ಲಾ ಕಾರ್ಯದರ್ಶಿಗಳಾದ ಕುಂಞಿರಾಮನ್ ಆಕಾಶ್, ಬಿ.ಎಂ. ಶರೀಫ್, ಸಲೀಂ ಯು.ಎ, ಆಸಿಫ್ ಸಿ.ಕೆ., ಕೆ.ವಿ. ದಾಮೋದರನ್, ಮೊಹಮ್ಮದ್ ಕುಂಞಿ ಕುಂಜಾರ್, ಉಣ್ಣಿಕೃಷ್ಣನ್ ವಿ.ಕೆ, ಬಾಲಕೃಷ್ಣನ್ ಕೆ.ವಿ. ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಎ.ಎ. ಅಸೀಸ್ ಸ್ವಾಗತಿಸಿ, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ ವಂದಿಸಿದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries