HEALTH TIPS

ಮಂಜೇಶ್ವರದಲ್ಲಿ ವ್ಯಾಪಕ ಮುಸ್ಲಿಂ ಲೀಗ್ ನಕಲಿ ಮತ ಸೇರ್ಪಡೆ ಬಗ್ಗೆ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು

 ಮಂಜೇಶ್ವರ: ಮಂಜೇಶ್ವರ ಕ್ಷೇತ್ರದಲ್ಲಿ ಮತದಾರರ ಯಾದಿಗೆ ನಕಲಿ ಮತಗಳನ್ನು ಸೇರಿಸಲಾಗುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಮತದಾರರ ಯಾದಿಯಲ್ಲಿ ಮುಸ್ಲಿಂ ಲೀಗ್ ನಕಲಿ ಮತಗಳನ್ನು ವ್ಯಾಪಕವಾಗಿ ಸೇರ್ಪಡೆಗೊಳಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 23 ವರ್ಷದಿಂದ ಮೇಲಿನ ಎಲ್ಲಾ ಹೊಸ ಮತದಾರರನ್ನು ಸರಿಯಾದ ದಾಖಲೆಗಳಿಲ್ಲದೆ ಸೇರಿಸಲಾಗುತ್ತಿದ್ದು, ಇತರ ರಾಜ್ಯಗಳ ಜನರನ್ನು ಕೂಡಾ ನಕಲಿ ದಾಖಲೆಗಳ ಮೂಲಕ ಸೇರಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.  ಈಬಗ್ಗೆ ಸೂಕ್ತ ತನಿಖೆ ನಡೆಸಲು ಬಿಎಲ್‌ಒಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಸಲೀಲ್ ಮಾಸ್ಟರ್ ಚುನಾವಣಾಧಿಕಾರಿಗೆ ದೂರು ನೀಡಿದ ತಂಡದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries