ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣದಲ್ಲಿ ಹದಿನೇಳರ ಹರೆಯದ ವಿದ್ಯಾರ್ಥೀನಿ ಹಾಗೂ ಗೃಹಿಣಿ ನಾಪತ್ತೆಯಾಗಿರುವ ಬಗ್ಗೆ ಪೊಲಿಸರುಕೇಸು ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಹಾಗೂ ಕಾಸರಗೋಡಿನ ಶಾಲೆಯೊಂದರ ಪ್ಲಸ್‍ಟು ವಿದ್ಯಾರ್ಥಿನಿ ಶುಕ್ರವಾರ ಪ್ರಾಕ್ಟಿಕಲ್ ಪರೀಕ್ಷೆಗೆಂದು ಬೆಳಗ್ಗೆ ಮನೆಯಿಂದ ಹೊರಟವಳು ಅನಂತರ ವಾಪಸಾಗಿಲ್ಲವೆಂದು ವಿದ್ಯಾರ್ಥಿನಿ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ವಾಹನ ಚಾಲನಾ ಟೆಸ್ಟ್‍ಗೆಂದು ನೆಕ್ರಾಜೆ ನೆಲ್ಲಿಕಟ್ಟೆ ವಠಾರದ 31ರ ಹರೆಯದ ಗೃಹಿಣಿ ಮನೆಯಿಂದ ಹೊರಟವಳು ವಾಪಸಾಗದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ.
ವಿದ್ಯಾನಗರದಲ್ಲಿ ಡ್ರೈವಿಂಗ್ ಟೆಸ್ಟ್ ಇರುವುದಾಗಿ ತಿಳಿಸಿ ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟವಳು ವಾಪಸಾಗಿಲ್ಲ ಎಂದು ಮಹಿಳೆ ಪತಿ ನೀಡಿದ ದೂರಿನನ್ವಯ ಪೊಲಿಸರು ಕೇಸು ದಾಖಲಿಸಿಕೊಂಡಿದ್ದಾರೆ.

