HEALTH TIPS

ಆರ್ಥಿಕ ಬಿಕ್ಕಟ್ಟು: ಸಂಸದರಿಗೆ ಪಿಂಚಣಿ ಸೌಲಭ್ಯ ರದ್ದತಿಗೆ ಶ್ರೀಲಂಕಾ ನಿರ್ಧಾರ

ಕೊಲಂಬೊ: ದೀರ್ಘಕಾಲದಿಂದ ದೇಶವನ್ನು ಕಂಗೆಡಿಸಿರುವ ಆರ್ಥಿಕ ಬಿಕ್ಕಟ್ಟನ್ನು ನಿಯಂತ್ರಿಸುವ ಉದ್ದೇಶದ ಸರಣಿ ಉಪಕ್ರಮಗಳ ಭಾಗವಾಗಿ ರಾಜಕಾರಣಿಗಳ ಸವಲತ್ತುಗಳನ್ನು ಕಡಿಮೆಗೊಳಿಸಲು ಮತ್ತು ಸಂಸದರಿಗೆ ಪಿಂಚಣಿ ಸೌಲಭ್ಯವನ್ನು ರದ್ದುಗೊಳಿಸಲು ಶ್ರೀಲಂಕಾದ ಸಂಸತ್ತು ನಿರ್ಧರಿಸಿದೆ.

ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯನ್ನು 225 ಸದಸ್ಯ ಬಲದ ಸಂಸತ್ತು 154-2 ಮತಗಳಿಂದ ಅನುಮೋದಿಸಿದೆ. 69 ಸದಸ್ಯರು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ವರದಿಯಾಗಿದೆ. ` ಇದುವರೆಗಿನ ವ್ಯವಸ್ಥೆಯಂತೆ, ಐದು ವರ್ಷದ ಅವಧಿ ಪೂರೈಸಿದ ಸಂಸತ್ ಸದಸ್ಯರು ಪಿಂಚಣಿಗೆ ಅರ್ಹರು. ಅಲ್ಲದೆ ಸಂಸದರಿಗೆ ಇತರ ಹಲವು ಸವಲತ್ತುಗಳು ಲಭಿಸುತ್ತವೆ. ಆದರೆ ಇತರ ಸಾರ್ವಜನಿಕ ಉದ್ಯೋಗಿಗಳ ನಿಯಮಗಳಿಗೆ ಹೋಲಿಸಿದರೆ ಇದು ತೀರಾ ವಿಪರೀತವಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಹೊಸ ಕಾನೂನು ತಕ್ಷಣದಿಂದಲೇ ಜಾರಿಯಾಗುತ್ತದೆ ಮತ್ತು ಈಗಾಗಲೇ ಪಿಂಚಣಿ ಪಡೆಯುತ್ತಿದ್ದವರೂ ಸೇರಿದಂತೆ ಸಂಸದರ ಪಿಂಚಣಿ ಸೌಲಭ್ಯ ರದ್ದಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries