HEALTH TIPS

ಹಬ್ಬಗಳ ಸಂಭ್ರಮ; 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ

ನವದೆಹಲಿ: ಹಬ್ಬಗಳ ಸಂಭ್ರಮದ ಸಮಯದಲ್ಲಿ 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. 

ಅಲ್ಲದೆ ಜನರು ಯಾವತ್ತೂ 'ವೋಕಲ್ ಫಾರ್ ಲೋಕಲ್' ಮರೆಯಬಾರದು ಎಂದು ಪ್ರತಿಪಾದಿಸಿದ್ದಾರೆ.

ಪವಿತ್ರ ರಂಜಾನ್ ವ್ರತಾಚರಣೆ ಆರಂಭವಾಗಿರುವುದನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

'ಇನ್ನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರಲಿದೆ. ನೀವೆಲ್ಲರೂ ಕುಟುಂಬ, ಪ್ರೀತಿಪಾತ್ರರೊಂದಿಗೆ ಎಲ್ಲ ಹಬ್ಬಗಳನ್ನು ಸಂತೋಷದಿಂದ ಆಚರಿಸುತ್ತೀರಿ. ಹಾಗೆಯೇ ಸ್ಥಳೀಯರಿಗೆ ನೆರವಾಗುವ ವೋಕಲ್ ಫಾರ್ ಲೋಕಲ್ ಮಾತ್ರ ನೆನಪಿಡಿ ಎಂದು ಕರೆ ನೀಡಿದ್ದಾರೆ.

'ಹೋಳಿ ಸೇರಿದಂತೆ ಇತರೆ ಹಬ್ಬಗಳ ಸಂದರ್ಭಗಳಲ್ಲಿ ವಿದೇಶಿ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ' ಎಂದು ಪ್ರಧಾನಿ ಮೋದಿ ಹೇಳಿದರು.

'ಅಂತಹ ಉತ್ಪನ್ನಗಳನ್ನು ಹಬ್ಬಗಳಿಂದ ದೂರವಿಡಿ. ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಿ. ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿದಾಗ ಸ್ವಾವಲಂಬಿ ದೇಶ ಮಾಡುವ ಅಭಿಯಾನಕ್ಕೂ ನೆರವಾಗುತ್ತೀರಿ' ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries