HEALTH TIPS

ವೆಚ್ಚ ಮೀರಿ ಆದಾಯ ಗಳಿಸುತ್ತಿದೆ ಭಾರತೀಯ ರೈಲ್ವೆ! ಕಾರಣ ಹೇಳಿದ ಅಶ್ವಿನಿ ವೈಷ್ಣವ್

ನವದೆಹಲಿ: 'ಭಾರತೀಯ ರೈಲ್ವೆ ಇತ್ತೀಚಿನ ವರ್ಷಗಳಲ್ಲಿ ಒಟ್ಟು ವೆಚ್ಚ ಮೀರಿ ಉತ್ತಮ ಆದಾಯ ಗಳಿಸುತ್ತಿದೆ' ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಅರುಹಿದ್ದಾರೆ.

'ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಸುಧಾರಣೆಗಳ ಪರಿಣಾಮವಾಗಿ ಇದು ಸಾಧ್ಯವಾಗಿದೆ' ಎಂದೂ ಅವರು ಸ್ಪಸ್ಟಪಡಿಸಿದ್ದಾರೆ.

ಪ್ರಶ್ನೋತ್ತರದ ವೇಳೆ ಸದಸ್ಯರೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಕಳೆದ 10 ವರ್ಷಗಳಲ್ಲಿ ರೈಲುಗಳಲ್ಲಿ ಸರಕು ಸಾಗಣೆ ಹೆಚ್ಚಿಸುವುದಕ್ಕೆ, ಪ್ರಯಾಣಿಕರಿಂದ ಬರುವ ಟೆಕೆಟ್ ಆದಾಯ ಹೆಚ್ಚಿಸಲು ಹಾಗೂ ಇಲಾಖೆಯ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಲು ಸಂಘಟಿತ ಶ್ರಮ ಹಾಕಲಾಗಿದೆ. ಇದರಿಂದ ಭಾರತೀಯ ರೈಲ್ವೆಯ ಹಣಕಾಸು ಆರೋಗ್ಯ ಸುಧಾರಿಸುತ್ತಿದೆ' ಎಂದು ಅವರು ಸ್ಪಷ್ಟಪಡಿಸಿದರು.

'ಸುಮಾರು 12 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ನಮ್ಮ ಇಲಾಖೆಯ 2025-26ರ ಬಜೆಟ್ ₹2.74 ಲಕ್ಷ ಕೋಟಿ. ಇದರಲ್ಲಿ ಉದ್ಯೋಗಿಗಳಿಗೆ ಸಂಬಳ ರೂಪದಲ್ಲಿಯೇ ₹1.18 ಲಕ್ಷ ಖರ್ಚಾಗುತ್ತದೆ. 18 ಲಕ್ಷದಷ್ಟಿರುವ ಪಿಂಚಣಿದಾರರಿಗೆ ₹65 ಸಾವಿರ ಕೋಟಿ ಖರ್ಚಾಗುತ್ತದೆ' ಎಂದರು.

'ಇಂಧನಕ್ಕೆ ₹32 ಸಾವಿರ ಕೋಟಿ ಖರ್ಚಾದರೆ ಹಣಕಾಸು ವೆಚ್ಚವಾಗಿ ₹23 ಸಾವಿರ ಕೋಟಿ ಖರ್ಚಾಗುತ್ತದೆ. ಅಲ್ಲದೇ ₹8 ಸಾವಿರ ಕೋಟಿ ನಿರ್ವಹಣಾ ವೆಚ್ಚವಾಗುತ್ತದೆ' ಎಂದು ವಿವರಿಸಿದರು.

'ಮೋದಿ ಸರ್ಕಾರ ಬಂದ ಮೇಲೆ ರೈಲ್ವೆ ಡಬಲೀಕರಣ, ವಿದ್ಯುದ್ದೀಕರಣ ಹಾಗೂ ವೆಚ್ಚ ನಿಯಂತ್ರಣಕ್ಕೆ ಭಾರಿ ಗಮನ ಹರಿಸಲಾಯಿತು. ಇದರಿಂದ ಇಂಧನ ಖರ್ಚು ಕಡಿಮೆ ಆಗಿ ಆದಾಯ ಹೆಚ್ಚುತ್ತಾ ಸಾಗಿತು' ಎಂದು ತಿಳಿಸಿದರು.

'ಈ ವರ್ಷ ಇಂಧನಕ್ಕೆ ₹32 ಸಾವಿರ ಕೋಟಿ ಖರ್ಚಾಗಿದೆ. ಅದರ ಹಿಂದಿನ ವರ್ಷ ₹37 ಸಾವಿರ ಕೋಟಿ ಖರ್ಚಾಗಿತ್ತು' ಎಂದು ಹೇಳಿದರು.

'ಒಟ್ಟು ವೆಚ್ಚದಲ್ಲಿ ಪ್ರಯಾಣಿಕರ ಸಹಾಯಧನ ವೆಚ್ಚಕ್ಕೇ ₹60 ಸಾವಿರ ಕೋಟಿ ಖರ್ಚಾಗುತ್ತದೆ' ಎಂದು ಹೇಳಿದ ಅವರು, 'ಒಟ್ಟಾರೆ ಕಳೆದ ಅವಧಿಯಲ್ಲಿ ಭಾರತೀಯ ರೈಲ್ವೆ ಒಟ್ಟು ವೆಚ್ಚ ಮೀರಿ ₹2,660 ಕೋಟಿ ಆದಾಯ ಗಳಿಸಿದೆ' ಎಂದು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries