HEALTH TIPS

ಸ್ಥಳೀಯಾಡಳಿತದಿಂದ 'ಅಕ್ಷರೋನ್ನತಿ' ಅಭಿಯಾನ-ಪುಸ್ತಕಗಳ ಸಂಗ್ರಹಕ್ಕೆ ಚಾಲನೆ

ಕಾಸರಗೋಡು: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳು, ಯುವಕರು ಮತ್ತು ವಯಸ್ಕರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಇಲಾಖೆ ವತಿಯಿಂದ'ಅಕ್ಷರೋನ್ನತಿ'ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಸಾಕ್ಷರತಾ ಮಿಷನ್, ಎನ್ನೆಸ್ಸೆಸ್,  ಸ್ವಯಂಸೇವಾ ಸಂಸ್ಥೆಗಳು, ನೌಕರರು ಮತ್ತು ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಭಿಯಾನ ಆರಂಭಿಸಲಾಗಿದೆ.   

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಮತ್ತು ಜಿಲ್ಲಾ ಪಂಚಾಯಿತಿ ನೌಕರರು 70 ಪುಸ್ತಕಗಳನ್ನು ಅಭಿಯಾನದ ಅಂಗವಾಗಿ ಹಸ್ತಾಂತರಿಸಿದರು.  ಜಿಲ್ಲಾ ಪಂಚಾಐಇತಿ ಅಧ್ಯಕ್ಷರಿಂದ  ಅಧ್ಯಕ್ಷರಿಂದ ಸ್ಥಳೀಯಾಡಳಿತ ಇಲಾಖೆ ಆಂತರಿಕ ಜಾಗೃತ ಅಧಿಕಾರಿ ಟಿ.ಟಿ. ಸುರೇಂದ್ರನ್  ಪುಸ್ತಕ ಸ್ವೀಕರಿಸಿದರು.

ಇದೇ ಸಂದರ್ಭ ಜಿಲ್ಲಾಡಳಿತವು ವಿವಿಧ ಸಂಘಟನೆಗಳಿಂದ ಸ್ವೀಕರಿಸಿದ ಪುಸ್ತಕ ಹಾಗೂ ಜಿಪಂ ಅಧ್ಯಕ್ಷರು ಸ್ವೀಕರಿಸಿದ ಪುಸ್ತಕಗಳನ್ನು ಅಕ್ಷರೋನ್ನತಿಗೆ ದಾನ ಮಾಡಲಾಯಿತು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕೆ.ಕೆ. ಸೋಯಾ, ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ, ನೌಕರರು, ಆರ್‍ಜಿಎಸ್‍ಎ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಆರ್‍ಜಿಎಸ್‍ಎ ಸಮುದಾಯ ಅಭಿವೃದ್ಧಿ ತಜ್ಞರು ಭಾಗವಹಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries