HEALTH TIPS

ಮಲಯಾಳ ಭಾಷಾ ಕಡ್ಡಾಯ ಮಸೂದೆಗೆ ತಿದ್ದುಪಡಿ-ನಗರಸಭಾಧ್ಯಕ್ಷೆ ಮೂಲಕ ಸರ್ಕಾರಕ್ಕೆ ಮನವಿ

ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ನಿರಂತರ ಮಲಯಾಳಿಕರಣಗೊಳಿಸುವ ಪ್ರಕ್ರಿಯೆಯಿಂದ ಕನ್ನಡ ಸಂಸ್ಕøತಿಗೆ ಧಕ್ಕೆಯಾಗುವ ಭೀತಿ ಎದುರಾಗಿದ್ದು, ಸರ್ಕಾರ ಜಾರಿಗೊಳಿಸಿರುವ ಮಲಯಾಳ ಭಾಷಾ ಮಸೂದೆ-2025ಕ್ಕೆಸೂಕ್ತ ತಿದ್ದುಪಡಿ ತರುವಂತೆ ಆಗ್ರಹಿಸಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ ನೇತೃತ್ವದಲ್ಲಿ ಕಾಸರಗೋಡು ನಗರಸಭಾ ವ್ಯಾಪ್ತಿಯ ವಿವಿಧ ಕನ್ನಡ ಸಂಘಟನೆಗಳ ಪರವಾಗಿ ಕೇರಳದ  ಮುಖ್ಯ ಮಂತ್ರಿಗೆ ಮನವಿಯನ್ನು  ಕಾಸರಗೋಡು ನಗರ ಸಭಾಧ್ಯಕ್ಷೆ ಶಾಹಿನ ಸಲೀಂ ಅವರ ಮೂಲಕ ಸಮರ್ಪಿಸಲಾಯಿತು. ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮನವಿ ಸಲ್ಲಿಸಲಾಯಿತು. 

ಒಂದು ಜನಾಂಗದ ಭಾಷೆ ಮತ್ತು ಸಂಸ್ಕೃತಿಯನ್ನು ಬಲವಂತವಾಗಿ ನಾಶಪಡಿಸುವ  ಮಲಯಾಳ ಭಾಷೆ ಕಡ್ಡಾಯ ಮಸೂದೆಗೆ ಅಗತ್ಯ ತಿದ್ದುಪಡಿ ತರುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.  ನಗರಸಭಾ ಆರೋಗ್ಯ-ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸಾ ಹಮೀದ್, ನಗರಸಭಾ ಕೌನ್ಸಿಲರ್ ಶಾರದಾ .ಬಿ , ಮಾಜಿ ಕೌನ್ಸಿಲರ್ ಶಂಕರ. ಕೆ  ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries