HEALTH TIPS

ಟ್ರಂಪ್‌ ಸುಂಕ ಅಕ್ರಮದ ವಿರುದ್ಧ ವಾದಿಸಿ ಗೆದ್ದ ಭಾರತೀಯ ವಲಸಿಗನ ಮಗ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂ ಕೋರ್ಟ್‌, ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿ 6:3 ಬಹುಮತದ ತೀರ್ಪು ನೀಡಿದೆ.

ಶುಕ್ರವಾರ (ಫೆ.20) ಅಮೆರಿಕದ ಸುಪ್ರೀಂ ಕೋರ್ಟ್‌ ನೀಡಿದ ಈ ಐತಿಹಾಸಿಕ ತೀರ್ಪು, ಇದೀಗ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಇದು ಅಧ್ಯಕ್ಷ ಟ್ರಂಪ್ ಅವರ ಎರಡನೇ ಅಧಿಕಾರ ಅವಧಿಯಲ್ಲಿ ಬಹುದೊಡ್ಡ ಹಿನ್ನಡೆಯಾಗಿದೆ.

ಟ್ರಂಪ್ ಆಡಳಿತದ ವಿವಾದಾತ್ಮಕ ಸುಂಕ ನೀತಿಗಳನ್ನು ಪ್ರಶ್ನಿಸುವಂತಹ ಪ್ರಮುಖ ಕಾನೂನು ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಭಾರತೀಯ ಮೂಲದ ಖ್ಯಾತ ವಕೀಲ ನೀಲ್ ಕತ್ಯಾಲ್, ಈ ಐತಿಹಾಸಿಕ ತೀರ್ಪಿಗೆ ಸಾಕ್ಷಿಯಾದರು. ಸಣ್ಣ ಉದ್ಯಮಗಳ ಗುಂಪಿನ ಪರವಾಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಮಾತನಾಡಿರುವ ನೀಲ್ ಕತ್ಯಾಲ್. 'ಈ ತೀರ್ಪು ನಮಗೆ ಸಂಪೂರ್ಣ ಗೆಲುವು. ಇದು ಸಾಂವಿಧಾನಿಕ ಮೌಲ್ಯಗಳ ಪುನರ್ ದೃಢೀಕರಣವಾಗಿದೆ ಹಾಗೂ ಅಮೆರಿಕದ ಜನರ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಯಾವುದೇ ಒಬ್ಬ ವ್ಯಕ್ತಿ ಹೊಂದಿಲ್ಲ ಎನ್ನುವ ಕಾನೂನಿನ ಆಶಯವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ ಎಂದು ಹೇಳಿದ್ದಾರೆ.

ಯಾರು ಈ ನೀಲ್ ಕತ್ಯಾಲ್ ?

ವಕೀಲ ಹಾಗೂ ಕಾನೂನು ತಜ್ಞರಾಗಿರುವ ನೀಲ್ ಕತ್ಯಾಲ್ ಅವರ ಪೋಷಕರು ಭಾರತೀಯ ಮೂಲದವರು. ತಾಯಿ ಪ್ರತಿಭಾ ಅವರು ಮಕ್ಕಳ ತಜ್ಞೆಯಾಗಿದ್ದು, ತಂದೆ ಸುಂದರ್ ಅವರು ಎಂಜಿನಯರ್‌ ಆಗಿದ್ದರು. 1970ರ ಮಾರ್ಚ್ 12ರಂದು ಚಿಕಾಗೋದಲ್ಲಿ ಜನಿಸಿದ ನೀಲ್ ಕತ್ಯಾಲ್, ಯೇಲ್ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಅವಧಿಯಲ್ಲಿ ಕಾನೂನು ಕೆಲಸ ಮಾಡಿದ್ದರು. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಪ್ರಭಾವದ ಕುರಿತು ತನಿಖೆ ಮಾಡಿದ ಮುಲ್ಲರ್ ತನಿಖೆಯ ಭಾಗವಾಗಿದ್ದರು ಹಾಗೂ ಡೆಮಾಕ್ರಟಿಕ್ ಅಧಿಕಾರವಧಿಯಲ್ಲಿ ಅಮೆರಿಕದ ಉಪಾಧ್ಯಕ್ಷರ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಒಬಾಮಾ ಆಡಳಿತದಲ್ಲಿ (2010-2011) ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ಹಲವು ಸಂಘಟನೆಗಳ ಜತೆ ಗುರುತಿಸಿಕೊಂಡಿರುವ ನೀಲ್ ಕತ್ಯಾಲ್, ಡೆಮಾಕ್ರಟಿಕ್ ಪಕ್ಷದ ಪರವಾಗಿ ಗುರುತಿಸಿಕೊಂಡಿದ್ದಾರೆ. 'ಇಂಪೀಚ್: ದಿ ಕೇಸ್ ಅಗೇನ್ಸ್ಟ್ ಡೊನಾಲ್ಡ್ ಟ್ರಂಪ್' ಹೆಸರಿನ ಪುಸ್ತಕವನ್ನು ಕೂಡ ಪ್ರಕಟಿಸಿದ್ದಾರೆ.

55 ವರ್ಷದ ನೀಲ್ ಕತ್ಯಾಲ್ ಅವರು ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಅತಿಹೆಚ್ಚು ಪ್ರಕರಣಗಳಲ್ಲಿ ವಾದ ಮಾಡಿದ ವಕೀಲರ ಪಟ್ಟಿಯಲ್ಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ ವರ್ಸಸ್ ಸ್ಟೀವನ್ಸ್, ಯುನೈಟೆಡ್ ಸ್ಟೇಟ್ಸ್ ವಾಣಿಜ್ಯ ಮಂಡಳಿ ವರ್ಸಸ್ ವೈಟಿಂಗ್, ಯುಎಸ್ ಏರ್ವೇಸ್ ವರ್ಸಸ್ ಮೆಕ್‌ಕಚನ್, ಟ್ರಂಪ್ ವರ್ಸಸ್ ಹವಾಯಿ ಸೇರಿದಂತೆ 52ಕ್ಕೂ ಅಧಿಕ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.

ಅಮೆರಿಕದ ನ್ಯಾಯಾಂಗ ಇಲಾಖೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ, ಎಡ್ಮಂಡ್ ಜೆ. ರಾಂಡೋಲ್ಫ್ ಪ್ರಶಸ್ತಿ ಹಾಗೂ 2017 ಮತ್ತು 2023 ರಲ್ಲಿ 'ಲಿಟಿಗೇಟರ್ ಆಫ್ ದಿ ಇಯರ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries