ಮಂಜೇಶ್ವರ: ಕುಂಜತ್ತೂರಿನಲ್ಲಿ ಅವಳಿ ಕೊಲೆಗೆ ಕಾರಣನಾದ ಕುಂಜತ್ತೂರು ಹಿಲ್‍ಟಾಪ್ ನಿವಾಸಿ, ಉಮ್ಮರ್‍ಫಾರೂಕ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಮ್ಮರ್ ಫಾರೂಕ್ ಪುತ್ರಿ ಮರಿಯಂ ಜುಮೈಲಾ ಹಾಗೂ ಈಕೆ ದೊಡ್ಡಪ್ಪ ಶೇಕುಞÂ ಅವರ ಅಂತ್ಯಸಂಸ್ಕಾರ ಬಂಗ್ರಮಂಜೇಶ್ವರದ ಪಾಂಡ್ಯಾಲ ಜುಮಾಮಸೀದಿ ವಠಾರದಲ್ಲಿ ಜರುಗಿತು. ನೂರಾರು ಮಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ತನಗೆ ಕುಟುಂಬದಿಂದ ಲಭಿಸಿದ್ದು, ಬಳಿಕ ಪತ್ನಿಯ ಹೆಸರಲ್ಲಿ ದಾಖಲೆ ಮಾಡಿಟ್ಟ 10 ಸೆಂಟ್ಸ್ ಸ್ಥಳವನ್ನು ವಾಪಾಸು ತನ್ನ ಹೆಸರಿಗೆ ಬರೆಸಬೇಕೆಂದು ಉಮ್ಮರ್ ಫಾರೂಖ್ ಬೇಡಿಕೆ ಇಟ್ಟಿದ್ದನು. ಆದರೆ ಈ ಜಾಗ ಪುತ್ರಿಯ ಶಿಕ್ಷಣ ಮತ್ತು ಭಾವೀ ಜೀವನಕ್ಕಾಗಿ ಬೇಕೆಂದು ತಾಹಿರಾ ಹಾಗೂ ಶೇಕುಞÂ ವಾದಿಸಿದ್ದರು. ಇದರಿಂದ ಕುಪಿತನಾದ ಉಮ್ಮರ್ ಜಗಳಕ್ಕಿಳಿದು ಶೇಕುಞÂಯನ್ನು ಕತ್ತಿಯಿಂದ ಕಡಿದು ಆಕ್ರಮಿಸಲೆತ್ನಿಸಿದ್ದಾನೆ. ಈ ವೇಳೆ ಶಾಲೆ ಬಿಟ್ಟು ಬಂದಿದ್ದ ಜುಮೈಲಾ ಜಗಳಬಿಡಿಸಲು ಮುಂದಾಗುತ್ತಿದ್ದಂತೆ ಆಕೆಗೆ ಅಪ್ಪನಿಂದಲೇ ಕತ್ತಿ ಏಟು ತಗಲಿ ಕೊಲೆಯಾಗಿದ್ದಾಳೆ. ಕಾಲಿಗೆ ಉಂಟಾದ ಗಾಐದಿಂದ ಅತಿಯಾದ ರಕ್ತಸ್ರಾವವಾಗಿ ಶೇಕುಞ ಅವರೂಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮದ್ಯಪಾನಿಯಾಗಿದ್ದ ಉಮ್ಮರ್ ಫಾರೂಕ್ ನಕಲಿಪಾಸ್‍ಪೋರ್ಟ್ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ವಿದೇಶದಿಂದ ಆಗಮಿಸಿದ್ದ ಈತನನ್ನು ನಕಲಿಪಾಸ್‍ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಠಾಣೆ ಪೊಲೀಸರು ಬಂಧಿಸಿ, 40 ದಿವಸಗಳ ನ್ಯಾಯಾಂಗಬಂಧನದ ನಂತರ ಬಿಡುಗಡೆಗೊಂಡು ವಾಪಾಸಾಗಿದ್ದನು.


