ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಮತ್ತು ಜಂಟಿ ಹೇಳಿಕೆಯಿಂದ ಉದ್ಭವಿಸಿರುವ "ಗಂಭೀರ ಕಳವಳಗಳ" ಬಗ್ಗೆ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದರು.
ಜಂಟಿ ಹೇಳಿಕೆಯಲ್ಲಿ ರಷ್ಯಾದ ತೈಲ ಖರೀದಿ ಮತ್ತು ಕೃಷಿ ಸಂಬಂಧಿತ ರಿಯಾಯಿತಿಗಳಿಗೆ ಸಂಬಂಧಿಸಿದ ಬದ್ಧತೆಗಳಿವೆ. ಸರ್ಕಾರ ಈ ಬಗ್ಗೆ ತಕ್ಷಣ ಹೇಳಿಕೆಯನ್ನು ನೀಡಬೇಕೆಂದು ತಿವಾರಿ ತಮ್ಮ ನೋಟಿಸ್‌ನಲ್ಲಿ ಒತ್ತಾಯಿಸಿದರು. ಅಂತಹ ಕ್ರಮಗಳು ಭಾರತದ ಇಂಧನ ಭದ್ರತೆ, ರೈತರ ಹಿತಾಸಕ್ತಿ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಎಂದು ಅವರು ಹೇಳಿದರು.
ಕಾರ್ಮಿಕರ ಮುಷ್ಕರಕ್ಕೆ ಬೆಂಬಲ
ಇಂದು ವಿವಿಧ ಸರ್ಕಾರಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಗಳು ಕರೆ ನೀಡಿದ್ದ ಭಾರತ್ ಬಂದ್‌ಗೂ ಬೆಂಬಲ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ದೇಶವಿರೋಧಿ’ ನೀತಿಗಳನ್ನು ಖಂಡಿಸಿ ಹಾಗೂ 4 ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಇಂದು ದೇಶವ್ಯಾಪಿ ಮುಷ್ಕರಕ್ಕೆ(ಭಾರತ ಬಂದ್) ಕರೆ ನೀಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

