ಬದಿಯಡ್ಕ: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದೇವರ ಉತ್ಸವ ಬಲಿ ನೆರವೇರಿತು. ಸೋಮವಾರ ಶ್ರೀಮಠದ ಮುಂಭಾಗ ನೃತ್ಯೋತ್ಸವ, ವಿಶೇಷ ತೆಪೆÇ್ಪೀತ್ಸವ, ಅವಭೃತ ಸ್ನಾನ, ಪ್ರಸಾದವಿತರಣೆಯಾಗಿ ಧ್ವಜಾವರೋಹಣದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಮಡಿತು.
18ರಂದು ಬೆಳಿಗ್ಗೆ 10ಕ್ಕೆ ಮಠದ ಮುಂಭಾಗ ವಿಷ್ಣುಮೂರ್ತಿ, ಗುಳಿಗ ದೈವದ ಕೋಲ ಊರವರ ವತಿಯಿಂದ ಜರಗಲಿದೆ. 22 ರಂದು ಬೆಳಿಗ್ಗೆ 7 ರಿಂದ ಶ್ರೀಮಠದ ಕಾವಲು ದೈವ ಕುಂಟಪಾಲ ಚಾಮುಂಡಿ ಕೋಲ ನಡೆಯಲಿದೆ.


