ಮಂಜೇಶ್ವರ: ಕುಂಜತ್ತೂರಿನಲ್ಲಿ ತಂಡವೊಂದು ಹಲ್ಲೆ ನಡೆಸಿದ ಪರಿಣಾಮ ಜಮಾಲಿಯಾ ಮಸೀದಿ ಸನಿಹದ ನಿವಾಸಿ, ಕುಂಜತ್ತೂರಿನ ಲೈಟ್ ಏಂಡ್ ಸೌಂಡ್ಸ್ ಸಿಬ್ಬಂದಿ ಇಬ್ರಾಹಿಂ ಖಲೀಲ್ ಗಾಯಗೊಂಡಿದ್ದಾರೆ. ಗಾಯಾಳು ಇಬ್ರಾಹಿಂ ಖಲೀಲ್ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕುಂಜತ್ತೂರಿನಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸಂದರ್ಭ ಇಬ್ರಾಹಿಂ ಖಲೀಲ್ ಹಾಗೂ ಲತೀಫ್ ಎಂಬವರ ಮಧ್ಯೆ ವಾಗ್ವಾದ ನಡೆದಿದ್ದು, ಸ್ಥಳೀಯರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಗಿತ್ತು. ನಂತರ ಲತೀಫ್ ತನ್ನ ಸಹಚರರನ್ನುಒಟ್ಟುಸೇರಿಸಿ ಇಬ್ರಾಹಿಂ ಖಲೀಲ್ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಲತೀಫ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.


