HEALTH TIPS

ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ

ಕಾಸರಗೋಡು: ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಂಗಲ್ಪಾಡಿ ಸೋಂಕಾಲ್ ಪ್ರತಾಪನಗರ ನಿವಾಸಿ ಶಿವಾನಂದ ಎಂಬವರ ಪುತ್ರ ಕೃಪೇಶ್(23)ಅವರನ್ನು ಶಿವಮೊಗ್ಗ ಸನಿಹದ ಕಳಸದಿಂದ ಪತ್ತೆಹಚ್ಚಲಾಗಿದೆ. ಹೈಕೋರ್ಟು ನಿರ್ದೇಶ ಪ್ರಕಾರ ಪೊಲೀಸ್ ವಿರಷ್ಠಾಧಿಕಾರಿ ವಿ.ಬಿ ವಿಜಯಭರತ್ ರೆಡ್ಡಿ ಅವರ  ನೇತೃತ್ವದಲ್ಲಿ ರಚಿಸಲಾಗಿರುವ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.

ಉಪ್ಪಳದ ಕೆ.ಎಂ ಸೂಪರ್ ಮಾರ್ಕೆಟ್‍ನಲ್ಲಿ ನೌಕರನಾಗಿದ್ದ ಕೃಪೇಶ್ 2025 ಸೆ.25ರಂದು ಮೆಡಿಕಲ್ ಅಂಗಡಿಗೆ ತೆರಳುವುದಾಗಿ ತಿಳಿಸಿ ಹೊರಟವನು ವಾಪಸಾಗದಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. 

ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕೃಪೇಶ್‍ಗೆ 10ಸಾವಿರ ರೂ. ದಂಡ ಹೇರಲಾಗಿದ್ದು, ಈ ಹಣ ನೀಡಲು ಸಾಧ್ಯವಾಘದ ಹಿನ್ನೆಲೆಯಲ್ಲಿ ಕೃಪೇಶ್ ನಾಪತ್ತೆಯಾಗಿದ್ದರೆನ್ನಲಾಗಿದೆ.ಕೃಪೇಶ್‍ನನ್ನು ಯಾರೋ ಅಪಹರಿಸಿರುವ ಬಗ್ಗೆ ತಾಯಿ, ಗೀತಾ ಹೈಕೋರ್ಟಿನಲ್ಲಿ ಹೇಬಿಯಸ್ ಕರ್ಪಸ್ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೃಪೇಶ್ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶ ನೀಡಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries