ಕಾಸರಗೋಡು: ಫೆಬ್ರವರಿ 22 ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುದ್ರಣ ಇಲಾಖೆಯಡಿಯಲ್ಲಿ ಫಾರಂ ಕಚೇರಿಯನ್ನು ಆನ್‍ಲೈನ್‍ನಲ್ಲಿ ಉದ್ಘಾಟಿಸಲಿದ್ದಾರೆ. ಕಾಸರಗೋಡು ಕಲೆಕ್ಟರೇಟ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ. ಶಶಿಂದ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕೆ.ಇಂನ್ಬಾಶೇಖರ್, ಮುದ್ರಣ ಇಲಾಖೆಯ ನಿರ್ದೇಶಕ ಅಮೀರ್ ಸಿ.ಎ, ಸರ್ಕಾರಿ ಮುದ್ರಣಾಲಯಗಳ ಸೂಪರಿಂಟೆಂಡೆಂಟ್ ಟಿ. ವೀರನ್, ಫಾರಂ ಕಂಟ್ರೋಲರ್ ಪ್ರಶಾಂತ್ ಕುಮಾರ್, ವಿವಿಧ ಕಾರ್ಮಿಕ ಸಂಘಗಳ ಮುಖಂಡರು ಮತ್ತು ಸೇವಾ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಫಾರಂ ಕಚೇರಿಯು ಕಾಸರಗೋಡು ಕಲೆಕ್ಟರೇಟ್‍ನ ಸಿ ಮತ್ತು ಡಿ ಬ್ಲಾಕ್‍ನ ಎರಡನೇ ಮಹಡಿಯಲ್ಲಿ ವಿದ್ಯಾನಗರದಲ್ಲಿ ಕಾರ್ಯನಿರ್ವಹಿಸಲಿದೆ.

