ಉಪ್ಪಳ: ಮಹಾತ್ಮಾ ಗಾಂಧಿಯವರ ನೆನಪು ಹಾಗೂ ಅವರ ತತ್ವ-ಆದರ್ಶಗಳು ವರ್ತಮಾನ ಕಾಲದಲ್ಲಿ ಅತ್ಯಂತಾಪೇಕ್ಷಿತವಾಗಿದ್ದು ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವ ಕೆಲಸ ನಡೆಯಬೇಕು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಚೇರಾಲು ನುಡಿದರು.
ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಗ್ರಾ.ಪಂ.ಉಪಾಧ್ಯಕ್ಷ ಗ್ರಾ.ಪಂ.ಉಪಾಧ್ಯಕ್ಷ ರಾಘವೇಂದ್ರ ಭಟ್, ಕಾಂಗ್ರೆಸ್ ಪದಾಧಿಕಾರಿಗಳಾದ ನಾರಾಯಣ ಏದಾರ್, ಸಚ್ಚಿದಾನಂದ ರೈ, ಮಂಡಲ ಕಾಂಗ್ರೆಸ್ ನೇತಾರರಾದ ಶಾಜಿ, ಪೌಲ್ ರೋಡ್ರಿಗಸ್, ಅಸೀಸ್ ಕಟ್ಟೆ, ಅಬ್ಬುಲ್ ರಸಾಕ್, ಎಡ್ವರ್ಡ್, ಬಾತಿಶ್ ಪಾಕ ಉಪಸ್ಥಿತರಿದ್ದರು. ಗಂಗಾಧರ ನಾಯ್ಕ್ ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

.jpg)

