HEALTH TIPS

ಪುಸ್ತಕ ವಿವಾದ | ಪ್ರಕಟಣೆಗೂ, ಘೋಷಣೆಗೂ ವ್ಯತ್ಯಾಸವಿದೆ- ಪೆಂಗ್ವಿನ್ ಇಂಡಿಯಾ

ನವದೆಹಲಿ: ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಕೃತಿ 'ಫೋರ್ ಸ್ಟಾರ್ಸ್ ಆಫ್‌ ಡೆಸ್ಟಿನಿ' ಕುರಿತ ವಿವಾದವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 

ಈ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ರ‍್ಯಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ), 'ನರವಣೆ ಅವರ ಪುಸ್ತಕವನ್ನು ಈ ವರೆಗೆ ಯಾವುದೇ ರೂಪದಲ್ಲಿ ಸಂಸ್ಥೆ ಪ್ರಕಟಿಸಿಲ್ಲ' ಎಂದು ಹೇಳಿದೆ.

ಪುಸ್ತಕದ ಲಭ್ಯತೆ ಕುರಿತು ನರವಣೆ ಅವರು 2023ರ ಡಿಸೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಅನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉಲ್ಲೇಖಿಸಿದ ಬೆನ್ನಲ್ಲೇ, ಪಿಆರ್‌ಎಚ್‌ಐ ಈ ಸ್ಪಷ್ಟನೆ ನೀಡಿದೆ.

'ಪುಸ್ತಕವೊಂದನ್ನು ಪ್ರಕಟಿಸುವ ಯೋಜನೆ ಬಗ್ಗೆ ಮಾಡುವ ಘೋಷಣೆಗೂ ಹಾಗೂ ಮುಂಗಡವಾಗಿ ಅದನ್ನು ಕಾಯ್ದಿರಿಸುವ ಅವಕಾಶದ ಕುರಿತು ಘೋಷಿಸುವುದಕ್ಕೂ ವ್ಯತ್ಯಾಸ ಇದೆ. ಈ ರೀತಿ ಘೋಷಣೆ ಮಾಡಿದಾಕ್ಷಣ ಪುಸ್ತಕವು ಪ್ರಕಟಗೊಂಡಿದೆ ಎಂಬುದಾಗಿ ಅರ್ಥೈಸಬಾರದು' ಎಂದು ಹೇಳಿದೆ.

'ಒಂದು ಪುಸ್ತಕ ಕುರಿತು ಮಾಡುವ ಘೋಷಣೆಯು, ಬರುವ ದಿನಗಳಲ್ಲಿ ಅದನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆ ಯೋಜಿಸಿದೆ ಎಂಬುದನ್ನು ಸೂಚಿಸುತ್ತದೆ' ಎಂದು ಹೇಳಿದೆ.

'ಪುಸ್ತಕವೊಂದನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ನೀಡುವ ಪರಿಪಾಟ ಕೂಡ ರೂಢಿಯಲ್ಲಿದೆ. ಪುಸ್ತಕ ಬಿಡುಗಡೆಗೂ ಮುನ್ನವೇ, ಓದುಗರು ಹಾಗೂ ಚಿಲ್ಲರೆ ಮಾರಾಟಗಾರರು ತಮಗೆ ಬೇಕಾಗುವಷ್ಟು ಪ್ರತಿಗಳನ್ನು ಕಾಯ್ದಿರಿಸಲು ಇದರಿಂದ ಸಾಧ್ಯವಾಗಲಿದೆ. ಆದರೆ, ಈ ರೀತಿ ಘೋಷಣೆ ಮಾಡಿದಾಕ್ಷಣ ಪುಸ್ತಕವು ಪ್ರಕಟವಾಗಿದೆ ಅಥವಾ ಖರೀದಿಗೆ ಲಭ್ಯವಿದೆ ಎಂದರ್ಥವಲ್ಲ' ಎಂದೂ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries