ಕಾಸರಗೋಡು: ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದ್ಯಂತ ವಿವಿಧ ಠಾಣೆಗಳ ಪೊಲೀಸ್ ಇನ್ಸ್‍ಪೆಕ್ಟರ್‍ಗಳ ವ್ಯಾಪಕ ವರ್ಗಾವಣೆ ಆರಂಭಗೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ ಠಾಣೆಗೆ ನೂತನ ಇನ್ಸ್‍ಪೆಕ್ಟರ್ ಆಗಿ ಜಿಜೀಶ್ ಅವರನ್ನು ನೇಮಿಸಲಾಗಿದ್ದು, ಇಲ್ಲಿಂದ ಪಿ. ಅಜಿತ್ ಕುಮಾರ್ ಅವರನ್ನು ತಳಿಪರಂಬಕ್ಕೆ ವರ್ಗಾಯಿಸಲಾಗಿದೆ. ಕುಂಬಳೆ ಕರಾವಳಿ ಠಾಣೆಯಿಂದ ಕೆ.ಆರ್ ಅನೂಪ್ ಅವರನ್ನು ಬದಿಯಡ್ಕ ಠಾಣೆಗೆ, ಕೋಯಿಕ್ಕೋಡಿಂದ ಬೈಜು ಕೆ. ಅವರನ್ನು ಕುಂಬಳೆ ಠಾಣೆಗೆ ವರ್ಗಾಯಿಸಲಾಗಿದೆ. ಹೊಸದುರ್ಗ ಠಾಣೆಗೆ ಶಿವನ್ ಜೋಡತ್, ವಿದ್ಯಾನಗರಕ್ಕೆ ಎಂ.ಪಿ ವಿನೀಶ್, ಬೇಡಡ್ಕಕ್ಕೆಕೆ.ಪಿ ವಿನೋದ್, ಅಂಬಲತ್ತರ ಠಾಣೆಗೆ ಸಿ. ಶಾಜು, ಚಿತ್ತಾರಿಕ್ಕಲ್ಗೆ ಉಮೇಶ್, ಚಂದೇರ ಠಾಣೆಗೆ ಎಂ.ವಿ ಶಿಜು, ರಾಜಾಪುರಕ್ಕೆ ಕೆ. ಸಂತೋಷ್, ನೀಲೇಶ್ವರಕ್ಕೆ ಕೆ. ಮುರಳೀಧರನ್, ಬೇಕಲ ಠಾಣೆಗೆ ಅನಿಲ್ ಕುಮಾರ್ ಅವರನ್ನುನೇಮಿಸಲಾಗಿದೆ.
ಚೀಮೇನಿ ಠಾಣೆಯ ನೂತನ ಇನ್ಸ್‍ಪೆಕ್ಟರ್ ಆಗಿ ಎಂ.ವಿ ರಾಜಗೋಪಾಲ್ ಅವರನ್ನು ನೇಮಿಸಲಾಗಿದೆ. ಆದೂರು ಠಾಣೆ ಇನ್ಸ್‍ಪೆಕ್ಟರ್ ವಿಷ್ಣುಪ್ರಸಾದ್ ಅವರನ್ನು ಕೋಯಿಕ್ಕೋಡಿಗೆ ರ್ಗಾಯಿಸಲಾಗಿದ್ದು, ಆದೂರು ಠಾಣೆಗೆ ಇನ್ನಷ್ಟೆ ನೇಮಕಾತಿ ನಡೆಯಬೇಕಾಗಿದೆ.

