ಕಾಸರಗೋಡು: ಕುಣಿಯದ ತಂಙಳ್ ಮುಲ್ಲಕೋಯ ನಗರಿಯಲ್ಲಿ ಕಳೆದ ಐದು ದಿವಸಗಳಿಂದ ನಡೆದುಬರುತ್ತಿದ್ದ ಸಮಸ್ತ ಕೇರಳ ಜಂ ಇಯತ್ತುಲ್ ಉಲಮಾ ಶತಮಾನೋತ್ಸವ ಸಮಾರೋಪ ಸಮಾರಂಭಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಕೇರಳ, ತಮಿಳುನಾಡು ಮತ್ತು ಕರ್ನಾಟಕದಿಂದ ಕಾರ್ಯಕರ್ತರು ಆಗಮಿಸಿದ್ದರು.
ಸಮ್ಮೇಳನಕ್ಕಾಗಿ ನಗರದಲ್ಲಿ ಸುಮಾರು ಒಂದು ಸಾವಿರ ಪೆÇಲೀಸ್ ಅಧಿಕಾರಿಗಳು ಮತ್ತು ನಾಲ್ಕು ಸಾವಿರ ಸ್ವಯಂಸೇವಕರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಐದು ದಿವಸಗಳ ಸಮ್ಮೇಳನ ವಿವಿಧ ಕ್ರಿಯಾ ಯೋಜನೆಗಳು, ನಿರ್ಣಯಗಳು, ಘೋಷಣೆಗಳು ಮತ್ತು ಶೈಕ್ಷಣಿಕ ತರಗತಿಗಳಿಗೆ ವೇದಿಕೆಯಾಗಿತ್ತು.
ಈಜಿಪ್ಟ್ ಅಲ್-ಅಝರ್ ವಿಶ್ವವಿದ್ಯಾಲಯದ ರೆಕ್ಟರ್ ಪೆÇ್ರ.ಡಾ.ಸಲಾಮಾ ಜುಮುವಾ ಅಲಿ ದಾವೂದ್ ಸಮಾರಂಭ ಉದ್ಘಾಟಿಸಿದರು. ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಸಾದಿಕಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ಮುಖ್ಯ ಭಾಷಣ ಮಾಡಿದರು. ಸಮಸ್ತ ಉಪಾಧ್ಯಕ್ಷ ಎಂ.ಕೆ. ಮೊಯ್ದೀನ್ ಕುಟ್ಟಿ ಮುಸ್ಲಿಯಾರ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇರಳ ಪ್ರತಿಪಕ್ಷ ಮುಖಂಡ ವಿ.ಡಿ. ಸತೀಶನ್, ಉಪ ನಾಯಕ ಪಿ.ಕೆ. ಕುಞËಲಿಕುಟ್ಟಿ, ಸೈಯದ್ ಅಲಿಯುಲ್ ಹಾಶಿಮಿ ಯುಎಇ, ಅಹದ್ ಸಾಮಿ ಹುಸೇನ್ ರಶೀದ್ ಅದೌಸರಿ ಬಹ್ರೇನ್, ಅಹ್ಮದ್ ಅಬ್ದುಲ್ ವಾಹಿದ್‍ಜಾಸಿಂ ಹಸನ್, ಇರಾಕ್ ಮಹಾ ಮುಫ್ತಿ ಡಾ.ರಫಿ ತಾಹಾ ರಿಫಾಯಿ, ಮುಹಮ್ಮದ್ ಕೋಯ ಜಮಲುಲ್ಲೈಲಿ, ಕೆ.ಉಮರ್ ಫೈಝಿ ಮುಕ್ಕಂ, ಕೆ.ಮೋಯಿನ್‍ಕುಟ್ಟಿ ಮಾಸ್ಟರ್, ಅಬ್ದುಸ್ಸಮದ್ ಪೂಕೊಟ್ಟೂರು, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಪಿ.ಎಂ. ಅಬ್ದುಸ್ಸಲಾಂ ಬಾಖವಿ ವಡಕ್ಕೆಕ್ಕಾಡ್ ಮೊದಲಾದವರು ಉಪಸ್ಥಿತರಿದ್ದರು.
ಸಯ್ಯದ್ ಜಿಫ್ರಿ ಮುತ್ತುಕೋಯ ತಙಲ್, ಲುಲು ಇಂಟರ್ ನ್ಯಾಷನಲ್ ಗ್ರೂಪ್ ಅಧ್ಯಕ್ಷ ಎಂ.ಎಯೂಸುಫಲಿ, ಸೈಯದ್ ಜಿಫ್ರಿ ಮುತ್ತುಕೋಯ ತಙಳ್, ಕುಣಿಯ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ ಚೇರ್ಮನ್ ಇಬ್ರಾಹಿಂ ಅಹ್ಮದಲಿ ಹಾಜಿ ಶಾರ್ಜಾ ಅವರಿಗೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ ಆಲಿಕುಟ್ಟಿ ಮುಸ್ಲಿಯಾರ್, ಪಾಣಕ್ಕಾಡ್ ರಶೀದಲಿ ಶಿಹಾಬ್ ಪೆÇ್ರತಂಗಳ್, ಮುಯೀನಾಲಿ ಶಿಹಾಬ್ ತಙಳ್, ಸಾಬಿಖಾಲಿ ಶಿಹಾಬ್ ತಙಳ್, ಸಂಸದ ಕುಂಜಿಮುಹಮ್ಮದ್ ಮುಸ್ಲಿಯಾರ್ ನೆಲ್ಲಾಯ, ಡಾ.ಪಿ.ಮುಹಮ್ಮದಲಿ ಗಫಾರ್, ಬೆಂಗಳೂರು ಶಾಸಕ ಎನ್.ಎ.ಹಾರಿಸ್, ಅಸ್ಗರಲಿ ಫೈಝಿ ಪಟ್ಟಿಕ್ಕಾಡ್, ಇಬ್ರಾಹಿಂ ಹಾಜಿ ಕುಣಿಯ, ಟಿ.ಕೆ. ಯೂಸುಫ್ ಹಾಜಿಮೊದಲಾದವರು ಉಪಸ್ಥಿತರಿದ್ದರು.


