ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಬೇಕಲ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಇದರ ಜಂಟಿ ಆಶ್ರಯದಲ್ಲಿ ಸಮನ್ವಯ ಗಡಿನಾಡ ಜಾನಪದ ಉತ್ಸವ ಇಂದು ಬೆಳಿಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಅರವತ್ ಎನ್‌ಕೆಪಿಎಸ್‌ಕೆ ಟ್ರಸ್ಟ್ ಆಂಪಿಥಿಯೇಟರ್‌ನಲ್ಲಿ ನಡೆಯಲಿದೆ.
ಬೆಳಿಗ್ಗೆ ೯ರಿಂದ ಮುದಿಯಕಲ್‌ನಿಂದ ಟ್ರಸ್ಟ್ ಕಚೇರಿವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ರಿಂದ ಚೆಂಡೆಮೇಳ, 10ರಿಂದ ಕಥಕ್ಕಳಿ- ಯಕ್ಷಗಾನ ಪ್ರದರ್ಶನ, 10.30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹಿದ್ ತೆಕ್ಕಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಪ್ರಾಸ್ತಾವಿಸುವರು. ನೋಂದಣಿ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸು ವರು. ಹಲವು ಗಣ್ಯರು ಉಪಸ್ಥಿv ರಿರುವರು.
ಇದೇ ವೇಳೆ ನಜೀರ್ ವೆಳಿಯಿಲ್‌ರಿಗೆ 2024ರ ಭಾವಭಾರತಿ ಪುರಸ್ಕಾರ, ಉದ್ಯಮಿ ಡಾ. ಮಣಿಕಂಠನ್ ಮೇಲೋತ್ತ್‌ರಿಗೆ 2025ರ ಭಾವಭಾರತಿ ಪುರಸ್ಕಾರ, ಕಥಕ್ಕಳಿ ಕಲಾವಿದ ಕೋಟಕ್ಕಲ್ ದೇವದಾಸನ್‌ರಿಗೆ ನಾಟ್ಯಾಚಾರ್ಯ ಪುರಸ್ಕಾರ, ಚೆರುತಾಳಂ ಕುಂಞಿರಾಮನ್ ಮಾರಾರ್‌ರಿಗೆ ಪ್ರತಿಭಾ ಪುರಸ್ಕಾರ (ಚೆಂಡೆ), ಕೋಟೆಕಲ್ ರಮೇಶನ್ ಮಾರಾರ್ ಪ್ರತಿಭಾ ಪುರಸ್ಕಾರ (ಮದ್ದಳೆ), ಕೋಡೋತ್ ತರವಾಡ್‌ಗೆ ದೇಸಿ ಪುರಸ್ಕಾರ, ಉದ್ಯಮಿ ಪ್ರಕಾಶ್ ಕುಂಪಲರಿಗೆ ಸಮಾಜರತ್ನ ಪ್ರಶಸ್ತಿ, ಜೋಸೆಫ್ ಮ್ಯಾತ್ಯಾಸ್, ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಇವರಿಗೆ ಜನಪದರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬಳಿಕ ಶಿವಾನಂದ ಕೋಟ್ಯಾನ್ ಕಟಪಾಡಿ ರಚಿಸಿದ ನಂಟು, ಡಾ. ಜಯ ರಾಜನ್ ಕಾನಾಡ್‌ರ ಬರವುದ ಸಾದಿ, ಮುನೀರ ಎ. ಇವರ ಹೃದ ಯರಾಗ ಪುಸ್ತಕ ಬಿಡುಗಡೆಗೊಳ್ಳ ಲಿದೆ. 11.30 ರಿಂದ ಬೆಂಗಳೂರು ತಾಯಿಬೇರು ದೇಸೀಬ್ಯಾಂಡ್ ಕಲಾ ವಿದರಿಂದ ಸಾಂಸ್ಕೃತಿಕ ಕಾರ್ಯ ಕ್ರಮ, ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ ಇವರಿಂದ ಜಾನಪದ ನೃತ್ಯ ಪ್ರದರ್ಶನಗೊಳ್ಳಲಿದೆ. ಮತ್ತೆ ನಡೆಯುವ ಕಥಕ್ಕಳಿ, ಯಕ್ಷಗಾನ ಮತ್ತು ಜಾನಪದ ಕಲೆ ಸಮನ್ವಯ ವಿಚಾರಸಂಕಿರಣವನ್ನು ಕೋಟೆಕಲ್ ಉಣ್ಣಿಕೃಷ್ಣನ್, ಜಯರಾಮ ಪಾಟಾಳಿ ಪಡುಮಲೆ ಪ್ರಸ್ತುತ ಪಡಿಸುವರು.
ಟ್ರಸ್ಟ್‌ನ ಅಧ್ಯಕ್ಷ ಡಾ. ಎ.ಎಂ. ಶ್ರೀಧರನ್ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಜಾನಪದ ಪರಿಷತ್ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಉದ್ಘಾಟಿಸುವರು. ಅಪರಾಹ್ನ 2ರಿಂದ ಜಾನಪದ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಲಿದ್ದು, ಪೂರಕ್ಕಳಿ, ಕೋಲಾಟ, ಕೈಕೊಟ್ಟಿಕಳಿ, ದಫ್‌ಮುಟ್, ಮಂಗಳಂ ಕಳಿ, ಅಲಾಮಿಕಳಿ, ಇರುಳ ನೃತ್ಯಂ ಪ್ರದರ್ಶನಗೊಳ್ಳಲಿದೆ. 5.30 ರಿಂದ ವಾರ್ಷಿಕ ಸಂಸ್ಮರಣಾ ಸಮಾರಂಭ ನಡೆಯಲಿದ್ದು, ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಡಾ. ಎ.ಎಂ. ಶ್ರೀಧರನ್ ಅಧ್ಯಕ್ಷತೆ ವಹಿಸುವರು. ಕೇರಳ ಕೇಂದ್ರೀಯ ವಿ.ವಿ. ಮಲಯಾಳ ವಿಭಾಗ ಮುಖ್ಯಸ್ಥ ಡಾ. ಚಂದ್ರಬೋಸ್ ಆರ್. ಸಂಸ್ಮರಣಾ ಭಾಷಣ ಮಾಡುವರು. ನಜೀರ್ ವೆಳಿಯಿಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಹಿ.ಚಿ. ಬೋರಲಿಂಗಯ್ಯ, ಉಣ್ಣಿರಾಜ್, ಕೆ. ಸುಜಾತ, ಟಿ. ಶೋಭನ, ಪಿ.ವಿ. ರಾಜೇಂದ್ರನ್ ಭಾಗವಹಿಸುವರು. 7ರಿಂದ ಯಕ್ಷಗಾನ, 8ರಿಂದ ಕಥಕ್ಕಳಿ ಪ್ರದರ್ಶನಗೊಳ್ಳಲಿದೆ.

