HEALTH TIPS

No deal but US steal: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಕಾಂಗ್ರೆಸ್ ಕಿಡಿ

ನವದೆಹಲಿ: ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಬುಧವಾರ ಟೀಕಿಸಿದ್ದು, ಈ ಒಪ್ಪಂದವು 'ವಾಷಿಂಗ್ಟನ್‌ನಲ್ಲಿರುವ ಪ್ರಧಾನಿಯವರ ಒಳ್ಳೆ ಸ್ನೇಹಿತ'ನಿಂದ ಮಾಡಲ್ಪಟ್ಟ ಕಳುವಾಗಿದೆ. ಇದು ನಮ್ಮ ರಾಜಕೀಯ ದಬ್ಬಾಳಿಕೆ ಮತ್ತು ಆರ್ಥಿಕ ರಾಜತಾಂತ್ರಿಕತೆಯ ಘೋರ ವೈಫಲ್ಯದ ಪ್ರತಿಬಿಂಬವಾಗಿದೆ ಎಂದು ಹೇಳಿದೆ.

'ಪ್ರಧಾನಿ ಮತ್ತು ಅವರ ಸುಳ್ಳುಗಾರರ ಗುಂಪು' ಏನೇ ಹೇಳಿದರೂ, ಅಮೆರಿಕವು ಭಾರತದಿಂದ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಪಡೆದುಕೊಂಡಿದೆ ಎಂಬುದು ಕಠೋರ ವಾಸ್ತವ ಎಂದು ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

'ಮೋದಿ ಸ್ನೇಹಪರರಲ್ಲದ ಹಲವು ಸ್ವತಂತ್ರ ವಿಶ್ಲೇಷಕರು ಮತ್ತು ವ್ಯಾಖ್ಯಾನಕಾರರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ದೇಶದ ಮಾರಾಟ ಮತ್ತು ಅವಮಾನಕರ ಶರಣಾಗತಿ ಎಂದು ಟೀಕಿಸಿದ್ದಾರೆ' ಎಂದು ರಮೇಶ್ ಹೇಳಿದ್ದಾರೆ.

ಪ್ರಧಾನಿ ಮತ್ತು ಅವರ ಸುಳ್ಳುಗಾರರ ಗುಂಪು ಏನೇ ಹೇಳಿದರೂ, ಕಟು ವಾಸ್ತವವೆಂದರೆ, ಅಮೆರಿಕವು ಭಾರತದಿಂದ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಪಡೆದುಕೊಂಡಿದೆ. 2019ರ ಸೆಪ್ಟೆಂಬರ್‌ನಲ್ಲಿ ಅವರ ಪರವಾಗಿ ಪ್ರಚಾರ ಮಾಡಿದ್ದು ಸೇರಿದಂತೆ ಟ್ರಂಪ್ ಜೊತೆಗಿನ ಮೋದಿಯ ಗಾಢ ಸ್ನೇಹದ ಹೊರತಾಗಿಯೂ ಇದು ಆಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ 2025ರ ಫೆಬ್ರುವರಿಯಲ್ಲಿ ಮೊದಲಿಗರಾಗಿ ಮೋದಿ ಶುಭಾಶಯ ಕೋರಿದ್ದರು. ಮೋದಿ ಅವರ ಟ್ರಂಪ್ ಜೊತೆಗಿನ ಸ್ನೇಹವು ಯಾವುದೇ ಅನುಕೂಲ ಮಾಡಿಕೊಡಲಿಲ್ಲ ಎಂದಿದ್ದಾರೆ.

ಮೋದಿ ಜೊತೆಗಿನ ಸ್ನೇಹದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುವ ಟ್ರಂಪ್, ಒಪ್ಪಂದದ ವೇಳೆ ಭಾರತಕ್ಕೆ ಬಹಳ ಆಘಾತ ನೀಡಿದ್ದಾರೆ ಎಂದೂ ರಮೇಶ್ ಕಿಡಿಕಾರಿದ್ದಾರೆ.

ಇದು ನಮ್ಮ ರಾಜಕೀಯ ಮತ್ತು ಆರ್ಥಿಕ ರಾಜತಾಂತ್ರಿಕತೆಯ ಘೋರ ವೈಫಲ್ಯ. ಈ ವ್ಯಾಪಾರ ಒಪ್ಪಂದವನ್ನು ಅಮೆರಿಕ ಕಳವು ಮಾಡಿದೆ. ಪ್ರಧಾನಿಯವರ ಆಪ್ತ ಮಿತ್ರ ಆಪರೇಷನ್ ಸಿಂಧೂರವನ್ನು ನಿಲ್ಲಿಸಿದ್ದಾಗಿ ಸುಮಾರು ನೂರು ಬಾರಿ ಹೇಳಿಕೊಂಡಿದ್ದಾರೆ'ಎಂದು ರಮೇಶ್ ಹೇಳಿದ್ದಾರೆ.

'ಪ್ರಧಾನಿ ಮೋದಿ ಮತ್ತು ಅವರ ತಂಡವು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಮಾಡುತ್ತಿದ್ದ ದೊಡ್ಡ ದೊಡ್ಡ ಹೇಳಿಕೆಗಳನ್ನು ತಳ್ಳಿಹಾಕಲು ಅಧ್ಯಕ್ಷ ಟ್ರಂಪ್ ಮತ್ತು ಅವರ ತಂಡಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ'ಎಂದು ಜೈರಾಮ್ ಎಕ್ಸ್ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

ಮೋದಿ ಸರ್ಕಾರವು ಮಾಡುತ್ತಿರುವ ಪ್ರಚಾರಕ್ಕಿಂತ ಒಪ್ಪಂದವು ಬಹಳ ಭಿನ್ನವಾಗಿದೆ ಎಂದು ಅವರು ಹೇಳಿದ್ಧಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries