HEALTH TIPS

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ: ʼSHe-Box' ಪೋರ್ಟಲ್ ಗೆ 254 ಮಹಿಳೆಯರ ದೂರು

ನವದೆಹಲಿ: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಬಗ್ಗೆ ಒಂದು ವರ್ಷದಲ್ಲಿ 254 ಮಹಿಳೆಯರು ಶೀ-ಬಾಕ್ಸ್ ಪೋರ್ಟಲ್ ಗೆ ದೂರು ನೀಡಿದ್ದಾಗಿ ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2024ರ ಆಗಸ್ಟ್ ನಲ್ಲಿ ಪಿಓಎಸ್‌ಎಚ್ ಕಾಯ್ದೆಯ ಅನುಷ್ಠಾನದ ನಿಗಾ ವಹಿಸುವ ಸಲುವಾಗಿ ಆರಂಭಿಸಿದ ಹೊಸ ಹಾಗೂ ಪರಿಷ್ಕೃತ ಪೋರ್ಟಲ್ ಶೀ-ಬಾಕ್ಸ್ ನಲ್ಲಿ ಇದುವರೆಗೆ ಒಟ್ಟು 296 ದೂರುಗಳು ದಾಖಲಾಗಿವೆ.

ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ ಬಾಕ್ಸ್ (ಶೀ-ಬಾಕ್ಸ್) ಪೋರ್ಟಲ್ ಗೆ ಬಂದಿರುವ 296 ದೂರುಗಳ ಪೈಕಿ 21 ದೂರುಗಳು ಈ ವರ್ಷದ ಫೆಬ್ರವರಿ 6ರವರೆಗೆ ಬಂದಿವೆ ಎಂದು ರಾಜ್ಯಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ ಸಚಿವೆ ಸಾವಿತ್ರಿ ಠಾಕೂರ್ ನೀಡಿದ ಲಿಖಿತ ಉತ್ತರದಲ್ಲಿ ವಿವರಿಸಲಾಗಿದೆ. ಇದುವರೆಗೆ 105 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013ನ್ನು ಉತ್ತಮವಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನ ಮಾಡುವ ಸಲುವಾಗಿ ಸರ್ಕಾರ 2024ರ ಆಗಸ್ಟ್ 29ರಂದು ಶೀ-ಬಾಕ್ಸ್ ಪೋರ್ಟಲ್ ಎಂಬ ವಿನೂತನ ಡಿಜಿಟಲ್ ಆಡಳಿತ ಉಪಕ್ರಮ ಆರಂಭಿಸಿತ್ತು ಎಂದು ವಿವರಿಸಿದರು.

ಪೋರ್ಟಲ್ ನಲ್ಲಿ 92400 ಸರ್ಕಾರಿ ಸಂಘ ಸಂಸ್ಥೆಗಳು ಸೇರಿದಂತೆ 1.49 ಲಕ್ಷ ಸಂಸ್ಥೆಗಳು ನೋಂದಾಯಿಸಿವೆ. ಈ ಪೈಕಿ 607000 ಕಂಪನಿಗಳು ತಮ್ಮ ವಿವರಗಳನ್ನು ಪರಿಷ್ಕರಿಸಿವೆ ಎಂದು ಅಂಕಿ ಅಂಶ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries