ನ್ಯೂಯಾರ್ಕ್: ಮುಂದಿನ 12 ರಿಂದ 18 ತಿಂಗಳುಗಳೊಳಗೆ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಬಹುತೇಕ ವೈಟ್‌ಕಾಲರ್ ಉದ್ಯೋಗಗಳು ಯಾಂತ್ರೀಕೃತವಾಗಲಿವೆ ಎಂದು ಮೈಕ್ರೋಸಾಫ್ಟ್‌ನ ಎಐ ವಿಭಾಗದ ವರಿಷ್ಠ ಮುಸ್ತಾಫ ಸುಲೈಮಾನ್ ತಿಳಿಸಿದ್ದಾರೆ. ಆ ಮೂಲಕ ಸಾವಿರಾರು ಮಂದಿಯ ಉದ್ಯೋಗ ನಷ್ಟವಾಗುವ ಸುಳಿವು ನೀಡಿದ್ದಾರೆ.
ಇದರಿಂದ ದಾಖಲೆಗಳ ಪರಿಶೀಲನೆ, ಆರ್ಥಿಕ ವಿಶ್ಲೇಷಣೆ, ಅನುಸರಣಾ ತಪಾಸಣೆ, ಮಾರ್ಕೆಟಿಂಗ್ ಆಪ್ಟಿಮೈಸೇಶನ್, ಶೆಡ್ಯೂಲಿಂಗ್, ಗ್ರಾಹಕ ಸಂವಹನದಂತಹ ಹಲವಾರು ಉದ್ಯೋಗಗಳು ಎಐ ಮೂಲಕ ನಡೆಯಲಿವೆ ಎಂದು ಅವರು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ನ್ಯಾಯವಾದಿ, ಲೆಕ್ಕಪತ್ರ ಪರಿಶೋಧಕ, ಪ್ರಾಜೆಕ್ಟ್ ಮ್ಯಾನೇಜರ್, ಮಾರ್ಕೆಟಿಂಗ್ ಅಧಿಕಾರಿ ಸೇರಿದಂತೆ ವೈಟ್‌ಕಾಲರ್ ಉದ್ಯೋಗಗಳ ಪೈಕಿ ಹೆಚ್ಚಿನವು ಮುಂದಿನ 12 ರಿಂದ 18 ತಿಂಗಳುಗಳೊಳಗೆ ಅತ್ಯಧಿಕ ಪ್ರಮಾಣದಲ್ಲಿ ಯಾಂತ್ರೀಕೃತಗೊಳ್ಳಲಿವೆ" ಎಂದು ಸುಲೈಮಾನ್ ಹೇಳಿದ್ದಾರೆ.

