2025ರಲ್ಲಿ 2,00,686 ಭಾರತೀಯ ಕೈಗಾರಿಕಾ ಕಾರ್ಮಿಕರು ಉದ್ಯೋಗಕ್ಕಾಗಿ ಯುಎಇಗೆ ತೆರಳಿದ್ದರೆ, ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದವರ ಸಂಖ್ಯೆ 1,36,812 ಆಗಿತ್ತು. ಹಿಂದಿನ ವರ್ಷ ಸೌದಿಗೆ 1,67,598 ಮತ್ತು ಯುಎಇಗೆ 1,11,308 ಭಾರತೀಯ ಕೈಗಾರಿಕಾ ಕಾರ್ಮಿಕರು ತೆರಳಿದ್ದರು.
2025ರಲ್ಲಿ ಒಟ್ಟು 4,49,110 ಕಾರ್ಮಿಕರು ಉದ್ಯೋಗವನ್ನರಸಿ 11 ಪ್ರಮುಖ ಕಾರ್ಮಿಕ ಆಮದು ದೇಶಗಳಿಗೆ ವಲಸೆ ಹೋಗಿದ್ದಾರೆ. 2024 ಮತ್ತು 2023ರಲ್ಲಿ ಈ ಸಂಖ್ಯೆ ಅನುಕ್ರಮವಾಗಿ 3,87,067 ಮತ್ತು 3,98,316 ಆಗಿತ್ತು.
ಖತರ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಕೈಗಾರಿಕಾ ಕಾರ್ಮಿಕರಿಗೆ ಬೇಡಿಕೆ ಕ್ರಮೇಣ ಇಳಿಕೆಯಾಗಿದ್ದರೆ, ಒಮಾನ್‌ನಲ್ಲಿ ನಿರಂತರವಾಗಿ ಹೆಚ್ಚುತ್ತಿದೆ.
ಭಾರೀ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ನಿರ್ಮಾಣ, ಲಾಜಿಸ್ಟಿಕ್ಸ್ ಮತ್ತು ತಯಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ, ಇತರ ದೇಶಗಳಿಗೆ ಹೋಲಿಸಿದರೆ ಶೇ.15ರಿಂದ ಶೇ.30ರಷ್ಟು ಹೆಚ್ಚಿನ ವೇತನ, ತೆರಿಗೆ ರಹಿತ ಆದಾಯ, ಗಳಿಕೆಯ ಸಂಪೂರ್ಣ ಹಣವನ್ನು ಭಾರತಕ್ಕೆ ಕಳುಹಿಸಲು ಅವಕಾಶ, ಭಾರತಕ್ಕೆ ಸಮೀಪತೆ, ಸುರಕ್ಷತೆ ಮತ್ತು ಕಡಿಮೆ ಪ್ರಯಾಣ ಅವಧಿ ಇವು ಯುಎಇ ಭಾರತೀಯ ಕೈಗಾರಿಕಾ ಕಾರ್ಮಿಕರ ನೆಚ್ಚಿನ ತಾಣವಾಗಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಾಗಿದೆ.

