ನವದೆಹಲಿ: 2026-27ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಾದೇಶಿಕ ವಾಯು ಸಂಪರ್ಕ ಯೋಜನೆಗೆ (ಉಡಾನ್) ಸುಮಾರು ಶೇ27ರಷ್ಟು ಹೆಚ್ಚುವರಿ ಅನುದಾನ ದೊರೆಯಲಿದೆ.
2025-26ನೇ ಸಾಲಿನ ಪರಿಷ್ಕೃತ ಬಜೆಟ್ ಅಂದಾಜಿನ ಪ್ರಕಾರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಒಟ್ಟು ಅನುದಾನ ಹಂಚಿಕೆಯನ್ನು ₹4,688.03 ಕೋಟಿಗೆ ನಿಗದಿಪಡಿಸಲಾಗಿದೆ.
ಮುಂದಿನ ಆರ್ಥಿಕ ವರ್ಷದಲ್ಲಿ ಈ ಅನುದಾನ ಹಂಚಿಕೆ ₹4,669.92 ಕೋಟಿಗೆ ತಲುಪಲಿದೆ.
ಹೀಗಾಗಿ ಉಡಾನ್‌ಗೆ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ. ಪ್ರಸಕ್ತ ವರ್ಷದಲ್ಲಿ ಉಡಾನ್ ಯೋಜನೆಯ ಅನುದಾನ 434.50 ಕೋಟಿ ಆಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಇದು ₹550 ಕೋಟಿಗೆ ಏರಿಕೆಯಾಗಲಿದೆ ಎಂದು ಬಜೆಟ್ ದಾಖಲೆಗಳಿಂದ ತಿಳಿದುಬಂದಿದೆ. ಹೀಗಾದರೆ ಉಡಾನ್ ಅನುದಾನ ಹಂಚಿಕೆಯಲ್ಲಿ ಶೇ 27 ಹೆಚ್ಚಳವಾದಂತಾಗುತ್ತದೆ.
ಪ್ರಾದೇಶಿಕ ವಿಮಾನಯಾನ ಕ್ಷೇತ್ರದಲ್ಲಿ ಸುಧಾರಣೆ ತಂದು ವಾಯುಯಾನ ಸೇವೆಯನ್ನು ಉತ್ತೇಜಿಸುವ ಉದ್ದೇಶವನ್ನು ಉಡಾನ್ ಹೊಂದಿದೆ.

