ಉದ್ಯಮಿ ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನ ಮಾಜಿ ತೀರ್ಪುಗಾರ ಅಶ್ನೀರ್ ಗ್ರೋವರ್ 2026ರ ಬಜೆಟ್ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಈ ವರ್ಷದ ಬಜೆಟ್ ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋನಲ್ಲಿ ನನ್ನ ಮಾತನ್ನು ನೆನಪಿಸಿತು. 'ನಿಮ್ಮ ಮತ್ತು ನಮ್ಮೆಲ್ಲರ ಸಮಯವನ್ನು ವ್ಯರ್ಥ ಮಾಡಿದ್ದೀರಿ' ಎಂದು ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರು, 'ನಿಮ್ಮ ಮಾತನ್ನು ಒಪ್ಪುತ್ತೇನೆ. ಸಮಯ ವ್ಯರ್ಥ ಮಾಡಿದ ಬಜೆಟ್ ಎಂದಿದ್ದಾರೆ.
'ಕನಿಷ್ಠ ಪಕ್ಷ ಶಾರ್ಕ್ ಟ್ಯಾಂಕ್ ಭಾಷಣಗಳು 10 ನಿಮಿಷಗಳಲ್ಲಿ ಕೊನೆಗೊಳ್ಳುತ್ತವೆ.' ಎಂದು ಗ್ರೋವರ್ ಅವರ ಪೋಸ್ಟ್‌ಗೆ ಆನ್‌ಲೈನ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

